ಬೀಜಿಂಗ್, ಮಾ. 24 (Daijiworld News/MB) : ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಹಬ್ಬಿರುವ ಬೆನ್ನಲ್ಲೇ ಕೊರೊನಾ ವೈರಸ್ ಮೊದಲು ಪತ್ತೆಯಾದ ದೇಶವಾದ ಚೀನಾದಲ್ಲಿ ಹಂಟಾ ವೈರಸ್ ಸೋಂಕಿನಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಶಾಂಡೊಂಗ್ ಪ್ರಾಂತ್ಯಕ್ಕೆ ಚಾರ್ಟರ್ಡ್ ಬಸ್ಸಿನಲ್ಲಿ ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಆತ ಸಾವನ್ನಪ್ಪಿದ್ದು ಆತನೊಂದಿಗ ಇದ್ದ ಇತರ 32 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಈ ಸುದ್ದಿ ತಿಳಿದು ಬಂದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಇದು ಕೊರೊನಾ ರೀತಿಯದ್ದೆ ಇನ್ನೊಂದು ವೈರಸ್ ಆಗಿರಬಹುದು ಎಂಬ ವದಂತಿಗಳು ಕೂಡಾ ಹಬ್ಬಿದೆ.
ಆದರೆ ನಿಜವಾಗಿ ಈ ವೈರಸ್ ಇಲಿಗಳ ಮೂಲಕ ಹರಡುವ ವೈರಸ್ ಆಗಿದ್ದು ಮನೆಯಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಂಕಿತ ಇಲಿಗಳು ಇದ್ದಲ್ಲಿ ಈ ಹಂಟಾ ವೈರಸ್ ಸೋಂಕು ಆರೋಗ್ಯವಂತ ಮನುಷ್ಯರಿಗೂ ತಗಲುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.
ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ, ಆದರೆ ಇಲಿಯ ಮಲ, ಮೂತ್ರ ಇತ್ಯಾದಿಗಳನ್ನು ಮುಟ್ಟಿ ನಂತರ ಕಣ್ಣು, ಮೂಗು, ಬಾಯಿ ಮುಟ್ಟಿದರೆ ತಗುಲುವ ಸಾಧ್ಯತೆಗಳು ಇದೆ.
ವಾಂತಿ ಭೇದಿ, ಸ್ಮಾಯು ನೋವು, ತಲೆನೋವು, ಜ್ವರ ಹೊಟ್ಟೆ ನೋವು, ಚಳಿ, ಹೊಟ್ಟೆಯ ಸಮಸ್ಯೆಈ ಸೋಂಕಿನ ಲಕ್ಷಣಗಳಾಗಿದ್ದು ಸೋಂಕು ತೀವ್ರವಾದ್ದಲ್ಲಿ ಶ್ವಾಸಕೋಶದಲ್ಲಿ ದ್ರವ ತುಂಬಿ ಉಸಿರಾಟದ ಸಮಸ್ಯೆ ಉಂಟಾಗಬಹುದು.