ಕೇಪ್ಟೌನ್, ಮಾ.24 (DaijiworldNews/PY) : ಕ್ರೈಸ್ತ ಪಾದ್ರಿಯೊಬ್ಬರು ಕೊರೊನಾ ಗುಣಪಡಿಸುವುದಾಗಿ ನಂಬಿಸಿ ಚರ್ಚ್ ನ ಹಲವು ಸದಸ್ಯರಿಗೆ ಡೆಟಾಲ್ ಕುಡಿಸಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಡೆಟಾಲ್ ಕುಡಿದವರಲ್ಲಿ 59 ಮಂದಿ ಮೃತಪಟ್ಟಿದ್ದು, ಇತರ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಈ ವಿಚಾರವಾಗಿ ಇಲ್ಲಿನ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲಗಲಿನ ಚರ್ಚ್ ಒಂದರ ಪಾದ್ರಿಯಾಗಿರುವ ರುಫಲ್ ಫಾಲಾ ಎಂಬುವವರು, ಮನುಷ್ಯನ ಕಾಯಿಲೆ ಗುಣಮುಖಪಡಿಸಲು ಡೆಟಾಲ್ ಉಪಯೋಗಿಸುವಂತೆ ನನಗೆ ಆ ದೇವರೇ ಸೂಚಿಸಿದ್ದಾನೆ.
ಈ ಸಂಬಂಧ ಇಲ್ಲಿನ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿನ ಚರ್ಚ್ ಒಂದರ ಪಾದ್ರಿಯಾಗಿರುವ ರುಫಸ್ ಫಾಲಾ ಎಂಬುವವರು, ಮನುಷ್ಯನ ಕಾಯಿಲೆ ಗುಣಮುಖಪಡಿಸಲು ಡೆಟಾಲ್ ಅನ್ನು ಬಳಸುವಂತೆ ಆ ದೇವರೇ ನನಗೆ ಸೂಚಿಸಿದ್ದಾನೆ.
ಹಾಗಾಗಿ, ಮೊದಲಿಗೆ ನಾನೇ ಡೆಟಾಲ್ ಕುಡಿಯುತ್ತೇನೆ. ನಂತರ ನೀವು ಕುಡಿಯಿರಿ. ಅಲ್ಲದೇ, ಡೆಟಾಲ್ ಅನ್ನು ಸೇವಿಸಿದ ಹಲವರು ತಾವು ಬಳಲುತ್ತಿದ್ದ ಹಲವಾರು ಕಾಯಿಲೆಗಳಿಂದ ಗುಣಮುಖವಾಗಿದ್ದಾಗಿ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ ಎಂದೆಲ್ಲಾ ನಂಬಿಸಿದ್ದು, ಇದನ್ನು ನಂಬಿದ್ದ ಹಲವರು ಡೆಟಾಲ್ ಕುಡಿದಿದ್ದರು.