ಕಾಬೂಲ್ , ಮಾ.25 (DaijiworldNews/PY) : ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಅಲ್ಪಸಂಖ್ಯಾತ ಸಿಖ್ಖರ ಧಾರ್ಮಿಕ ಕೇಂದ್ರವಾಗಿರುವ ಗುರುದ್ವಾರದಲ್ಲಿ ಕಿಡಿಗೇಡಿಯೋರ್ವ ಬುಧವಾರ ಬೆಳಗ್ಗೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ.
ಬಂಧೂಕುದಾರಿ ಗುರುದ್ವಾರಕ್ಕೆ ಪ್ರವೇಶಿಸಿದ್ದು, ಮನಬಂದಂತೆ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಯಾರೂ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ತಿಂಗಳ ಪ್ರಾರಂಭದಲ್ಲಿ ಐಸಿಸ್ ಉಗ್ರರ ದಾಳಿಯಿಂದಾಗಿ ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದ ೩೨ ಮಂದಿ ಸಾವನ್ನಪ್ಪಿದ್ದರು.