ವುಹಾನ್, ಮಾ.26 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ಪ್ರಾರಂಭವಾದ ಚೀನಾದ ವುಹಾನ್ ನಗರದಲ್ಲಿ ಇದೀಗ ಸಾರ್ವಜನಿಕ ಸಾರಿಗೆ ಸೇವೆಗಳು ಪುನಃ ಪ್ರಾರಂಭಗೊಳ್ಳುತ್ತಿವೆ. ಒಂಭತ್ತು ವಾರಗಳ ಲಾಕ್ಡೌನ್ ನಂತರ ಜೀವನ ಯಥಾಸ್ಥಿತಿ ಬಂದಂತಾಗಿದೆ. ಎಂದಿನಂತೆ ಜನರು ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ರಸ್ತೆಯತ್ತ ಸಾಗಿದ್ದಾರೆ. ಮಂಗಳವಾರದಿಂದ ಪ್ರಾರಂಭವಾಗುವಂತೆ ನೂರಕ್ಕೂ ಹೆಚ್ಚಿನ ಬಸ್ ರೂಟ್ಗಳು ಪುನರಾರಂಭಗೊಂಡಿವೆ.
ಚೀನಾದ ಬಹುತೇಕ ನಗರಗಳು ಎಂದಿನಂತೆ ಮತ್ತೆ ಪುನರಾರಂಭಗೊಂಡಿದ್ದು, ಖಾಲಿ ಖಾಲಿಯಾದ ರಸ್ತೆಗಳಲ್ಲಿ ಇದೀಗ ವಾಹನಗಳ ಸದ್ದು ಕೇಳಿಬರುತ್ತಿದೆ. ಶಾಪಿಂಗ್ ಮಾಲ್ಗಳು, ರೆಸ್ಟೋರೆಂಟ್ಗಳು ತೆರೆಯುತ್ತಿವೆ. ಹಲವಾರು ಮಾಲ್ಗಳ ಪಾರ್ಕಿಂಗ್ ಪ್ರದೇಶಗಳು ವಾಹನಗಳಿಂದ ತುಂಬುತ್ತಿವೆ. ತಮ್ಮ ಕೆಲಸಗಳಿಗೆ ಮಾಚ್ಮೆನ್ಗಳು ವಾಪಾಸ್ಸಾಗುತ್ತಿದ್ದಾರೆ. ಶಾಲಾ-ಕಾಲೇಜುಗಳು ಮುಂಬರುವ ವಾರದಿಂದ ಪುನಃ ಪ್ರಾರಂಭವಾಗಲಿದ್ದು, ಈ ವಿಚಾರವಾಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಸಭೆ ಸೇರಿವೆ. ಆದರೆ ಜನರು ಮಾತ್ರ ಇನ್ನೂ ರಸ್ತೆಗಿಳಿಯಲು ಭಯಗೊಂಡಿದ್ಧಾರೆ.
ಪ್ರತಿ ಬಸ್ಗಳಲ್ಲಿ ಡ್ರೈವರ್ನೊಂದಿಗೆ ಒಬ್ಬ ಮೇಲ್ವಚಾರಕ ಇರಲಿದ್ದಾನೆ. ಎಲ್ಲರನ್ನೂ ಬಸ್ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಿಯೇ ಅವರನ್ನು ಒಳಗೆ ಸೇರಿಸಿಕೊಳ್ಳಲಾಗುತ್ತಿದೆ. ಸೂಪರ್ ವೈಸರ್ ಪ್ರಯಾಣಿಕರ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದು, ಸ್ಕ್ಯಾನ್ ಮಾಡುತ್ತಿದ್ದಾರೆ. ಸ್ಕ್ಯಾನ್ ಮಾಡುತ್ತಿದ್ದಾರೆ. ಟೆಂಪರೇಚರ್ ಟೆಸ್ಟ್ ನಲ್ಲಿ ಪಾಸ್ ಆದವರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಯಾರಲ್ಲಾದರೂ ರೋಗ ಲಕ್ಷಣಗಳು ಕಂಡು ಬಂದರೆ ತುರ್ತು ವಾಹನಗಳ ಮೂಲಕ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುತ್ತಿದೆ. ಪ್ರತಿ ಆಂಬುಲೆನ್ಸ್ ಗಳಲ್ಲಿ ಡಾಕ್ಟರ್ಸ್, ವಂಟಿಲೇಟರ್ ಅನ್ನು ಒದಗಿಸಲಾಗಿದೆ. ಆಂಬುಲೆನ್ಸ್ಗಳು ಆಂಬುಲೆನ್ಸ್ ಗಳು ಪ್ರತಿ ಬಸ್ ನಿಲ್ದಾಣಗಳಲ್ಲಿ ಇರಲಿದೆ. ರಸ್ತೆ ಬಳಸುವವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಅಲ್ಲಿನ ಆರೋಗ್ಯ ಇಲಾಖೆ ಸೂಚಿಸಿದೆ. ಪ್ರಯಾಣಿಕರು ಬಸ್ ಹತ್ತುವ ಸಂದರ್ಭದಲ್ಲೂ ಮಾಸ್ಕ್ ಬಳಸುವುದು ಕಡ್ಡಾಯವಾಗಿದೆ.
ಹೆಚ್ಚಾಗಿ ಹಿರಿಯ ನಾಗರಿಕರಲ್ಲಿ ಕೊರೊನಾ ಸೋಂಕು ಬೇಗನೆ ಕಾಣಿಸಿಕೊಳ್ಳುವ ಕಾರಣ ಅಂತಹವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಕಾರಣಕ್ಕಾಗಿ 65 ವರ್ಷ ಮೇಲ್ಪಟ್ಟವರು ಯಾವುದೇ ಕಾರಣಕ್ಕೆ ರಸ್ತೆಗಿಳಿಯದಂತೆ ಸೂಚಿಸಲಾಗಿದೆ. ಪೊಲೀಸರ ಕಣ್ತಪ್ಪಿಸಿ ಯಾರಾದರೂ ಸಾರ್ವಜಿಕ ಸ್ಥಳಗಳಿಗೆ ಇಳಿದರೆ ಅವರನ್ನು ಬಂಧನಕ್ಕೆ ಒಳಪಡಿಸಲಾಗುತ್ತಿದೆ. ಇನ್ನು ಸಾರ್ವಜನಿಕ ಬಸ್ಗಳಲ್ಲೂ ಅವರು ಪ್ರಯಾಣಿಸುವಂತಿಲ್ಲ.
ಕೊರೊನಾ ವೈರಸ್ ನಗರದಾತ್ಯಂತ ವ್ಯಾಪಕವಾಗಿ ಹಬ್ಬಿದ ಪರಿಣಾಮ ಜನವರಿ ತೃತೀಯ ವಾರದ ಬಳಿಕ ವುಹಾನ್ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಎಲ್ಲಾ ಜನಜೀವನ ಸ್ತಬ್ಧವಾಗಿದ್ದವು. ಇದರ ಪರಿಣಾಮವಾಗಿ ಕೊರೊನಾ ಹರಡುವಿಕೆ ಕಡಿಮೆಯಾಗಿದ್ದವು. ವೈರಸ್ ನಿಂದ ರಕ್ಷಿಸಿಕೊಳ್ಳಲು ಇದೇ ಒಂದು ಮಾರ್ಗವಾಗಿದ್ದ, ಸದ್ಯ ಜಗತ್ತಿನಾದ್ಯಂತ ಲಾಕ್ ಡೌನ್ ಪರಿಸ್ಥಿತಿ ಇದೆ