ಚೀನಾ, ಮಾ.26 (DaijiworldNews/PY) : ಗಡಿ ವಿಷಯವಾಗಿ ಪದೇ ಪದೇ ಕ್ಯಾತೆ ತೆಗೆದು ಭಾರತೀಯರ ಕೆಂಗಣ್ಣಿಗೆ ಸಿಲುಕುತ್ತಿದ್ದ ಚೀನಾ ಇದೀಗ ಭಾರತದೊಂದಿಗೆ ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಕೈಜೋಡಿಸಿದ್ದು, ಭಾರತಕ್ಕೆ ಸಹಾಯ ಮಾಡುವುದಾಗಿ ಘೋಷಿಸಿದೆ.
ಚೀನಾ ಈಗಾಗಲೇ ಕೊರೊನಾ ವೈರಸ್ನಿಂದ ಬಹುತೇಕ ಮುಕ್ತಿಪಡೆದುಕೊಂಡಿರುವ ಸ್ಥಿತಿಯಲ್ಲಿದ್ದು, ಕೊರೊನಾ ವೈರಸ್ ವಿರುದ್ದ ದಿಟ್ಟ ಹೋರಾಟ ಮಾಡುತ್ತಿರುವ ಭಾರತಕ್ಕೆ ನೆರವು ನೀಡುವುದಾಗಿ ಘೋಷಣೆ ಮಾಡಿದೆ.
ಈಗಾಗಲೇ ಚೀನಾ ಕೊರೊನಾ ವೈರಸ್ನಿಂದ ಸಂಕಷ್ಟದಲ್ಲಿರುವ ಇಟಲಿಗೆ ನೆರವು ಘೋಷಣೆ ಮಾಡಿದ್ದು, ಭಾರತಕ್ಕೂ ಇದೀಗ ನೆರವು ನೀಡುವುದಾಗಿ ಘೋಷಿಸಿದೆ.
ಈ ಕುರಿತು ಚೀನಾದಲ್ಲಿರುವ ಭಾರತದ ರಾಯಭಾರಿ ಕಚೇರಿ ಅಧಿಕಾರಿ ಜೀ.ರೊಂಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಬೆಂಬಲ ಹಾಗೂ ನೆರವು ನೀಡಲು ಗ್ ಅವರು ಮಾಹಿತಿ ನೀಡಿದ್ದು, ಭಾರತಕ್ಕೆ ನೆರವು ನೀಡಲು ಚೀನಾ ಮಂದಾಗಿದೆ. ನಮ್ಮ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಬೆಂಬಲ ಹಾಗೂ ನೆರವು ನೀಡಲು ನಾವು ಸಿದ್ಧರಿದ್ದೇವೆಂದು ಹೇಳಿದೆ.
ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಸಂದರ್ಭ ಭಾರತ ವೈದ್ಯಕೀಯ ನೆರವು ನೀಡಿತ್ತು. ಭಾರತೀಯರು ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಚೀನಾಗೆ ಬೆಂಬಲ ನೀಡಿದ್ದರು. ಇದಕ್ಕಾಗಿ ಭಾರತವನ್ನು ನಾವು ಪ್ರಶಂಸಿಸುತ್ತೇವೆ ಹಾಗೂ ಅದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ಧಾರೆ.
ಭಾರತವೂ ಕೂಡಾ ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಆರಂಭಿಕ ದಿನಗಳಲ್ಲಿಯೇ ವಿಜಯ ಸಾಧಿಸಲಿದೆ. ಕೊರೊನಾ ವೈರಸ್ ವಿರುದ್ದ ಹೋರಾಟ ಮಾಡುತ್ತಿರುವ ಭಾರತ ಹಾಗೂ ಇತರೆ ರಾಷ್ಟ್ರಗಳಿಗೆ ಬೆಂಬಲ ನೀಡುವ ಮೂಲಕ ವೈರಸ್ ವಿರುದ್ದದ ಹೋರಾಟವನ್ನು ನಾವು ಮುಂದುವರೆಸುತ್ತೇವೆ ಎಂದಿದ್ದಾರೆ.