ಬೀಜಿಂಗ್, ಮಾ.29 (DaijiworldNews/PY) : ಚೀನಾ ಸರ್ಕಾರ ಎರಡು ತಿಂಗಳ ಬಳಿಕ ಚೀನಾದ ಹುಬೈ ಪ್ರಾಂತ್ಯದಲ್ಲಿ ಲಾಕ್ಡೌನ್ ಅನ್ನು ಸಡಿಲಿಕೆ ಮಾಡಿದ ಬೆನ್ನಲ್ಲೇ ಹುಬೈ ಪ್ರಾಂತ್ಯ ತೊರೆಯಲು ಸಾವಿರಾರು ಮಂದಿ ಮುಂದಾಗಿದ್ದು, ಇದರಿಂದಾಗಿ, ಅಪಾರ ಜನಸಂದಣಿ ಟ್ರಾಫಿಕ್ ಜಾಮ್, ಹಿಂಸಾಚಾರ ಅಲ್ಲದೇ, ರೈಲು ಸಂಚಾರದಲ್ಲಿಯೂ ಜನ ತುಂಬಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಹಲವಾರು ವಿಡಿಯೋಗಳನ್ನು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ನೆರೆಯ ಜಿಯಾಂಕ್ಸಿ ಪ್ರಾಂತ್ಯ ಹಾಗೂ ಹುಬೈ ಪ್ರಾಂತ್ಯವನ್ನಯ ಸಂಪರ್ಕಿಸುವ ಸೇತುವೆ ಸ್ಥಳದಲ್ಲಿ ಮಾರಾಮಾರಿ ನಡೆದಿದೆ ಎಂದು ಹೇಳಿದೆ.
ಜನರು ಬ್ಯಾರಿಕೇಡ್ಗಳನ್ನು ತೆರವುಗೊಳಿಸುವಂತೆ ಹೇಳುತ್ತಿದ್ದು, ಹೆಚ್ಚು ಜನ ಸೇರಿರುವ ಜನರು ಹಾಗೂ ಪೊಲೀಸರ ನಡುವೆ ಹೊಡೆದಾಟ ನಡೆಯುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.
ಜಿಯಾಂಕ್ಸಿ ಪ್ರಾಂತ್ಯಕ್ಕೆ ಹುಬೈ ಪ್ರಾಂತ್ಯದಿಂದ ತೆರಳಲು ಜನರನ್ನು ತಡೆದ ಕಾರಣ ಗಲಭೆ ಉಂಟಾಗಿದೆ ಎಂದು ವರದಿ ತಿಳಿಸಿದೆ.