ವಾಷಿಂಗ್ಟನ್, ಮಾ 29 (Daijiworld News/MSP): ವಿಶ್ವದಲ್ಲೇ ಮಾರಕವಾಗಿ ಪರಿಣಮಿಸಿರುವ ಮಾರಣಾಂತಿಕ ಕೊರೊನಾ ಸೋಂಕಿಗೆ ಅಮೆರಿಕಾದಲ್ಲಿ ಶಿಶುವೊಂದು ಸಾವನ್ನಪ್ಪಿದೆ. ಇದು ಕೊರೊನಾ ಸೋಂಕಿಗೆ ಬಲಿ ಅತ್ಯಂತ ಕಿರಿ ವಯಸ್ಸಿನ ಸೋಂಕಿತ ಆಗಿದೆ.
ಅಮೆರೀಕಾದ ಇಲಿನಾಯ್ಸ್ ರಾಜ್ಯದ ಗವರ್ನರ್ ಜೆಬಿ ಪ್ರಿಟ್ಜ್ಕರ್ ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ," 'ಕಳೆದ 24 ಗಂಟೆಯೊಳಗೆ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರಲ್ಲಿ ಒಂದು ವರ್ಷದೊಳಗಿನ ಮಗುವು ಸೇರಿದೆ' ಎಂದಿದ್ದಾರೆ.
ಶಿಶುವಿನ ಸಾವನ್ನು ಇದೊಂದು ಅತಿ ಅಪರೂಪದ ದುರ್ಘಟನೆ ಎಂದು ವಿಶ್ವವೇ ಹೇಳಿದೆ. ಚಿಕಾಗೋದಲ್ಲಿ ಮೃತಪಟ್ಟ ಮಗುವಿನ ವಯಸ್ಸು ಒಂದು ವರ್ಷಕ್ಕಿಂತಲೂ ಕಡಿಮೆ ಇದ್ದು, ಆ ಮಗುವಿಗೆ ಕೊರೊನಾ ಸೋಂಕಿರುವುದು ಖಚಿತವಾಗಿತ್ತು. ಇಲ್ಲಿಯವರೆಗೆ ಕೊವಿಡ್-19ಗೆ ಸಂಬಂಧಿಸಿ ಘಟಿಸಿದ ಸಾವುಗಳಲ್ಲಿ ಮಗುವಿನ ಸಾವು ಸಂಭವಿಸಿರಲಿಲ್ಲ. ಇದು ಜಗತ್ತಿನಲ್ಲಿಯೇ ಮೊದಲ ಬಾರಿ ನಡೆದಿರುವ ದುರ್ಘಟನೆಯಾಗಿದ್ದು, ತುಂಬಾ ಕಳವಳಕಾರಿಯಾಗಿದೆ' ಸಾರ್ವಜನಿಕ ಆರೋಗ್ಯ ಇಲಾಖೆ ವಕ್ತಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಶಿಶುವಿನ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಆರೋಗ್ಯ ಇಲಾಖೆ "ಮಗುವಿನ ಸಾವಿಗೆ ಕಾರಣ ಕಂಡುಹಿಡಿಯುವ ಸಲುವಾಗಿ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ.