ಬರ್ಲಿನ್, ಮಾ.30 (DaijiworldNews/PY) : ದೇಶದ ಅರ್ಥವ್ಯವಸ್ಥೆ ಕೊರೊನಾ ವೈರಸ್ ಪರಿಣಾಮದಿಂದ ಕುಸಿದಿದದ್ದಕ್ಕೆ ನೊಂದ ಜರ್ಮನಿಯ ಹಣಕಾಸು ಸಚಿವರೋರ್ವರು ಆತ್ಮಹತ್ಯೆ ಮಾಡಿಕೊಡಿದ್ದಾರೆ. ರೈಲ್ವೆ ಟ್ರಾಕ್ ಬಳಿ ಶನಿವಾರ ವಿತ್ತ ಸಚಿವರ ಮೃತ ದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದ ಹೆಸ್ಸೆ ರಾಜ್ಯದ ಹಣಕಾಸು ಸಚಿವ ಥಾಮಸ್ ಶೇಫರ್. ದೇಶದಲ್ಲಿ ಕೊರೊನ ವೈರಸ್ನಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ತಬ್ದಗೊಂಡಿದ್ದವು. ಶೇಫರ್ ಅವರು ಪುನಶ್ಚೇತನಗೊಳಿಸಲು ಹಗಲಿರುಳು ಕೆಲಸ ಮಾಡುತ್ತಿದ್ದರು. ಆದರೂ ಹೆಸ್ಸೆ ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ.
ಕೊರೊನಾ ಸೋಂಕಿಗೆ ಜರ್ಮನಿಯಲ್ಲಿ50 ಸಾವಿರಕ್ಕೂ ಅಧಿಕ ಜನರು ಒಳಗಾಗಿದ್ದರೆ, ಕೊರೊನಾಕ್ಕೆ 400ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಸ್ಸೆ ರಾಜ್ಯದ ಮುಖ್ಯಮಂತ್ರಿ ವಾಲ್ಕರ್ ಅವರು, ಶೇಫರ್ ಅವರ ಸಾವಿನ ಸುದ್ದಿ ನಂಬಲಾಗುತ್ತಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ನಂಬಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.