ವಾಷಿಂಗ್ಟನ್, ಮಾ.30 (DaijiworldNews/PY) : ಕೊರೊನಾ ಸೋಂಕು ಹರಡುವಿಕೆ ಅಮೆರಿಕಾದಲ್ಲಿ ಮೂರನೇ ಹಂತಕ್ಕೆ ತಲುಪಿರುವ ನಿಟ್ಟಿನಲ್ಲಿ ಮಾಸ್ಕ್, ಕೈಗವಸು, ನಿಲುವಂಗಿ ಹಾಗೂ ಇತರ ಮೂಲಭೂತ ವೈದ್ಯಕೀಯ ಸಾಮಾಗ್ರಿಗಳ ತೀವ್ರ ಕೊರತೆ ಉಂಟಾಗಿದೆ.
ಅಮೆರಿಕವು ಕೊರೊನಾ ತಡೆಗಟ್ಟುವ ಸಲುವಾಗಿ ಚೀನಾದ ಸಹಾಯ ಕೋರಿದೆ.
ಅಮೆರಿಕದ ನ್ಯೂಯಾರ್ಕ್ ನಗರಕ್ಕರ ಚೀನಾದ ಶಾಂಘೈನಿಂದ 80 ಟನ್ ಕೈಗವಸು, ನಿಲುವಂಗಿ ಹಾಗೂ ವೈದ್ಯಕೀಯ ಸಾಮಾಗ್ರಿಗಳನ್ನು ಹೊತ್ತ ವಿಮಾನ ಭಾನುವಾರ ತಲುಪಿದೆ.
ಅಮೆರಿಕದಲ್ಲಿ ಎಪ್ರಿಲ್ ಆರಂಭದ ಸಂದರ್ಭ ಕೊರೊನಾ ಸೋಂಕು ಶೀಘ್ರಗತಿಯಲ್ಲಿ ವ್ಯಾಪಿಸುವ ಮುನ್ಸೂಚನೆ ಇದ್ದು, ಚೀನಾದಿಂದ 22 ವಿಮಾನಗಳಲ್ಲಿ ಮೂಲಭೂತ ಸಾಮಾಗ್ರಿಗಳನ್ನು ತರಿಸಿಕೊಳ್ಳಲಾಗುವುದು ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ಧಾರೆ.
ನ್ಯೂಯಾರ್ಕ್ಗೆ ಭಾನುವಾರ ಬಂದಿಳಿದ ವಿಮಾನವು 13 ಸಾವಿರ ಎನ್-95 ಗವಸುಗಳು, 18 ಲಕ್ಷ ಮಾಸ್ಕ್ಗಳು ಹಾಗೂ ನಿಲುವಂಗಿಗಳು, 10 ಲಕ್ಷ ಕೈವಸುಗಳು ಹಾಗೂ ಸಾವಿರಾರು ಥರ್ಮೊಮೀಟರ್ಗಳನ್ನು ಹೊಂದಿತ್ತು.
ನ್ಯೂಯಾರ್ಕ್, ನ್ಯೂಜರ್ಸಿ ಮತ್ತು ಕನೆಕ್ಟಿಕಟ್ ರಾಜ್ಯಗಳಿಗೆ ಈ ಎಲ್ಲ ಸಾಮಗ್ರಿಗಳನ್ನು ವಿತರಣೆ ಮಾಡುವುದಾಗಿ ಫೆಡರಲ್ ಏಮರ್ಜನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ ತಿಳಿಸಿದೆ.
ಒಂದು ವರ್ಷ ಕೊರೊನಾ ಸೋಂಕು ಮುಂದುವರಿದರೆ ಅಮೆರಿಕ ಒಂದಕ್ಕೆ 3.5 ಬಿಲಿಯನ್ ಮಾಸ್ಕ್ಗಳು ಬೇಕಾಗುತ್ತವೆ ಎಂದು ಅಲ್ಲಿನ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಅಂದಾಜಿಸಿದೆ.