ವುಹಾನ್, ಮಾ.30 (Daijiworld News/MB) : ವಿಶ್ವದಾದ್ಯಂತ 28 ಸಾವಿರಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿರುವ ಕೊರೊನಾ ಮೊದಲು ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದು ಮೊದಲು ವುಹಾನ್ ನಗರದ 57 ವರ್ಷದ ಮಹಿಳೆಯಲ್ಲಿ ಈ ಸೋಂಕು ಪತ್ತೆಯಾಗಿತ್ತು ಎಂದು ವರದಿಯಾಗಿದೆ.
ವೈ ಗಿಕ್ಸಿನ್ ಎಂಬ ಈ ಮಹಿಳೆ ವುಹಾನ್ ನಗರದ ಹುನಾನ್ ಮಾರುಕಟ್ಟೆಯಲ್ಲಿ ಸಿಗಡಿಗಳ ಮಾರಾಟ ಮಾಡುತ್ತಿದ್ದಳು ಎಂದು ಹೇಳಲಾಗಿದೆ.
ಡಿಸೆಂಬರ್ 10ರಂದು ಈಕೆಗೆ ಶೀತ ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆದು ಕೊರೊನಾ ಇರುವುದು ದೃಢಪಟ್ಟ ಬಳಿಕ ಚಿಕತ್ಸೆ ಪಡೆದ ಗಿಕ್ಸಿನ್ ಜನವರಿ ಮೊದಲ ವಾರದಲ್ಲೇ ಗುಣಮುಖರಾಗಿ, ಮನೆಗೆ ತೆರಳಿದ್ದರು.
ಅಷ್ಟರಲ್ಲೇ ಹುನಾನಾ ಮಾರುಕಟ್ಟೆಯ ಸಾಕಷ್ಟು ಮಂದಿಗೆ ಈ ಸೋಂಕು ತಗುಲಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.