ವಿಶ್ವಸಂಸ್ಥೆ, ಮಾ.31(DaijiworldNews/PY): ವಿಶ್ವಸಂಸ್ಥೆಯ ಜಂಟಿ ಸಿಬ್ಬಂದಿ ಪಿಂಚಣಿ ನಿಧಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಪ್ರತಿನಿಧಿ ಸಮಿತಿಯ ಅಧಿಕಾರಿಯಾಗಿದ್ದ ಭಾರತದ ಸುಧೀರ್ ರಾಜ್ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುಧೀರ್ ರಾಜ್ಕುಮಾರ್ ಅವರನ್ನು 2017ರಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ಅವರು ನೇಮಕ ಮಾಡಿದ್ದರು. ರಾಜೀನಾಮೆಗೆ ಕಾರಣ ಏನು ಎಂಬುದು ಅಧಿಕೃತವಾಗಿ ತಿಳಿಸಿಲ್ಲ. ಇವರ ರಾಜೀನಾಮೆಯನ್ನು ಗುಟೆರಸ್ ಅವರು ಅಂಗೀಕರಿಸಿದ್ದು, ಸುಧೀರ್ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸುಧೀರ್ ರಾಜ್ಕುಮಾರ್ ಅವರು ಮಾ.31ರಂದು ಜಾರಿಗೆ ಬರುವಂತೆ ರಾಜೀನಾಮೆ ನೀಡಿರುವುದಾಗಿ ಗುಟೆರಸ್ ವಕ್ತಾರ ಸ್ಟೀಫನ್ ಗುಜಾರಿಕ್ ತಿಳಿಸಿದ್ದಾರೆ.