ವಾಷಿಂಗ್ಟನ್, ಮಾ.31(DaijiworldNews/PY) : ಅಮೆರಿಕದಲ್ಲಿ ನೆಲೆಸಿರುವ ಭಾರತೀಯರನ್ನು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ಆತಂಕಕ್ಕೊಳಪಡಿಸಿದ್ದು, ಅವರನ್ನು ತವರಿಗೆ ಮರಳಿಸಲು ಅಲ್ಲಿನ ಸರ್ಕಾರ ಭಾರತದೊಂದಿಗೆ ಮಾತುಕತೆ ನಡೆಸಿದೆ.
ಭಾರತ ಹಾಗೂ ಅಮೆರಿಕ ದೇಶಗಳು ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿವೆ. ಹಾಗಾಗಿ, ಅಮೇರಿಕದಲ್ಲಿ ನೆಲೆಸಿರುವ ಭಾರತೀಯರು ಸ್ವದೇಶಕ್ಕೆ ಮರಳಲು ಸಾಧ್ಯತೆಗಳು ಇರಲಿಲ್ಲ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ತವರಿಗೆ ಮರಳುವ ಬಯಕೆ ಹೊಂದಿದ್ದು, ಅವರಿಗೆ ಭಾರತಕ್ಕೆ ವಾಪಾಸ್ಸಾಗಲು ಸಹಾಯ ಮಾಡುವುದಾಗಿ ಟ್ರಂಪ್ ಸರ್ಕಾರ ತಿಳಿಸಿದೆ. ಈ ಬಗ್ಗೆ ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಹೊಂದಿರುವುದಾಗಿ ತಿಳಿಸಿದೆ.
ಅಮೆರಿಕದಲ್ಲಿ ಮುಂದಿನ ಎರಡು ವಾರಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲಿದ್ದು, ಭೀಕರ ಪರಿಸ್ಥಿತಿ ತಲೆದೋರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.