ಚೀನಾ, ಏ 01 (Daijiworld News/MSP): ಪ್ರಪಂಚದಾದ್ಯಂತ ಹರಡಿಕೊಂಡಿರುವ ಕೊರೋನಾ ವೈರಸ್ ನ ಒಂದೊಂದೆ ಹೊಸ ವಿಲಕ್ಷಣ ಸ್ವರೂಪ ತೆರೆದುಕೊಳ್ಳುತ್ತಿದೆ. ಇದೀಗ ಕೊರೊನಾದ 'ಸೆಕೆಂಡ್ ವೇವ್' ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ.
ರೋಗ ಲಕ್ಷಣಗಳೇ ಕಾಣಿಸಿಕೊಳ್ಳದ ಕೊರೊನಾ ಮಾನವನ ದೇಹದಲ್ಲಿ ಕೊರೋನಾ ಸೋಂಕು ಇರುವ 1541 ಪ್ರಕರಣಗಳು ವರದಿಯಾಗಿವೆ. ಇದಕ್ಕಿಂತಲೂ ಹಿಂದೆ ಕೊರೊನಾ ಸೋಂಕಿತರು ಗುಣಮುಖರಾದರೂ ಅವರಲ್ಲಿ ಮತ್ತೆ ಕೊರೊನಾ ವೈರಾಣು ಇರುವುದನ್ನು ಚೀನಾ ವೈದ್ಯರು ಪತ್ತೆಹಚ್ಚಿದ್ದರು. ಆದರೆ ಇದಕ್ಕಿಂತಲೂ ವಿಲಕ್ಷಣವಾಗಿ ರೋಗಲಕ್ಷಣ ಕಾಣಿಸಿಕೊಳ್ಳದೆ ಕೊರೊನಾ ವೈರಸ್ ಮಾನವನ ದೇಹವನ್ನು ಆವರಿಸಿಕೊಳ್ಳುತ್ತಿರುವುದನ್ನು ಕಂಡು ವೈದ್ಯ ಲೋಕವೇ ಬೆಚ್ಚಿಬಿದ್ದಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಬಗ್ಗೆ ಮಾಹಿತಿ ನೀಡಿದ್ದು ಈ ರೀತಿ ಕೊರೋನಾ ವೈರಸ್ ಹರಡುವಿಕೆಯನ್ನು 'ಸೆಕೆಂಡ್ ವೇವ್' (second wave) ಎಂದೇ ವಿಶ್ಲೇಷಿಸಲಾಗುತ್ತಿದೆ.
ರೋಗಲಕ್ಷಣಗಳಿಲ್ಲದ, ವೈರಾಣುಗಳಿರುವ 1,541 ಜನರನ್ನು ಚೀನಾದ ಆಸ್ಪತ್ರೆಗಳಲ್ಲಿ ನಿಗಾದಲ್ಲಿರಿಸಲಾಗಿದೆ. ಈ ನಡುವೆ ಹೊರಗಿನಿಂದ ಬಂದಿರುವ 205 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಎನ್ ಹೆಚ್ ಸಿ ಹೇಳಿದೆ.