ಸಿಂಗಾಪುರ, ಎ.04 (DaijiworldNews/PY) : ಮಾರಣಾಂತಿಕ ಕೊರೊನಾ ವೈರಸ್ ಮತ್ತಷ್ಟು ಹರಡದಂತೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಎ.7ರಿಂದ ಒಂದು ತಿಂಗಳ ಕಾಲ ಲಾಕ್ಡೌನ್ ಮಾಡಲು ಸಿಂಗಾಪುರ ಸರ್ಕಾರ ತೀರ್ಮಾನಿಸಿದ್ದು, ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಬಂದ್ ಆಗಿರಲಿವೆ. ಅಗತ್ಯ ವಸ್ತುಗಳು ಹಾಗೂ ಸೇವೆಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗುವುದು ಎಂದು ಪ್ರಧಾನಿ ಲೀ ಹಿಸೆನ್ ಲೂಂಗ್ ಶುಕ್ರವಾರ ಹೇಳಿದ್ದಾರೆ.
ಪ್ರಸ್ತುತದ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಾರಿ ಸವಾಲು ಇರುವಂತೆ ತೋರುತ್ತಿದ್ದು, ಅದರೊಂದಿಗೆ ಪರಿಸ್ಥಿತಿ ಕೈಮೀರುವಂತೆ ಕಾಣುತ್ತಿದೆ. ಹಾಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಜನರು ಮನೆಯಿಂದ ಹೊರಗೆ ಬರಬೇಕು. ಎಲ್ಲಾ ನಿವಾಸಿಗಳಿಗೆ ಭಾನುವಾರದಿಂದ ಮರು ಬಳಕೆಯಾಗುವಂತಹ ಮಾಸ್ಕ್ಗಳನ್ನು ಸರ್ಕಾರದ ವತಿಯಿಂದಲೇ ನೀಡಲಾಗಿತ್ತದೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕು ಸಿಂಗಾಪುರದಲ್ಲಿ ಎರಡು ವಾರಗಳ ಅವಧಿಯಲ್ಲಿ ವ್ಯಾಪಕವಾಗಿ ಹರಡಿದೆ. ಗುರುವಾರದವರೆಗಿನ ಮಾಹಿತಿಯಂತೆ 1,049 ಸೋಂಕಿನ ಪ್ರಕರಣಗಳು ಖಚಿತಪಟ್ಟಿದ್ದು, ಕೊರೊನಾ ಸೋಂಕಿಗೆ ದೇಶಾದ್ಯಂತ ಈಗಾಗಲೇ ಐವರು ಮೃತಪಟ್ಟಿದ್ದಾರೆ.