ಇಸ್ಲಮಾಬಾದ್, ಎ.05 (Daijiworld News/MB) : ಕೊರೊನಾ ವೈರಸ್ ಜಗತ್ತಿನಾದ್ಯಂತ ಹರಡುತ್ತಿದ್ದು ದೇಶಗಳು ಪರಸ್ಪರ ಸಹಾಯಕ್ಕೆ ನೆರವಿನ ಹಸ್ತ ಚಾಚುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಪರಮಾಪ್ತ ಮಿತ್ರ ರಾಷ್ಟ್ರವೆಂದೇ ಕರೆಸಿಕೊಳ್ಳುವ ಚೀನಾ, ಕೊರೊನಾ ವಿರುದ್ಧವಾಗಿ ಹೋರಾಡಲು ಪಾಕ್ಗೆ ಅಂಡರ್ ವೇರ್ನಿಂದ ಎನ್-95 ಮಾಸ್ಕ್ ತಯಾರಿಸಿ ಕಳಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನಿ ಮಾಧ್ಯಮಗಳು ತಮ್ಮ ದೇಶಕ್ಕೆ ಚೀನಾ ಅಂಡರ್ ವೇರ್ ನಿಂದ ಎನ್-95 ಮಾಸ್ಕ್ ತಯಾರಿಸಿ ಕಳಿಸಿರುವ ಬಗ್ಗೆ ವರದಿ ಮಾಡಿದ್ದು ಕೊರೋನಾ ವಿರುದ್ಧ ಹೋರಾಡುವುದಕ್ಕೆ ಅತ್ಯಧಿಕ ಗುಣಮಟ್ಟದ ವೈದ್ಯಕೀಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದ ಚೀನಾ, ಈಗ ಅಂಡರ್ ವೇರ್ ನಿಂದ ಎನ್-95 ಮಾಸ್ಕ್ ತಯಾರಿಸಿ ಕಳಿಸಿದೆ ಎಂದಿದೆ.
ಹಾಗೆಯೇ ವೈದ್ಯಕೀಯ ನೆರವು ನೀಡುವ ಭರವಸೆಯನ್ನೂ ಪೂರೈಸಿಲ್ಲ ಎಂದು ವರದಿಯಾಗಿದೆ.
ಸರ್ಕಾರ ಚೀನಾ ಕಳುಹಿಹಿಸಿದ ಮಾಸ್ಕ್ಗಳನ್ನು ನೇರವಾಗಿ ಆಸ್ಪತ್ರೆಗೆ ಕಳುಹಿಸಿದ್ದು ಬಾಕ್ಸ್ ತೆಗೆದು ನೋಡಿದ ಸಿಬ್ಬಂದಿಗಳು ಅಂಡರ್ವೇರ್ನಿಂದ ತಯಾರಾದ ಮಾಸ್ಕ್ ನೋಡಿ ಆಶ್ಚರ್ಯಪಟ್ಟಿದ್ದಾರೆ.
ಪಾಕ್ ವಾಹಿನಿಯೊಂದು ಈ ಸುದ್ದಿಯನ್ನು ಪ್ರಕಟಿಸಿದ್ದು ಅದನ್ನು ಭಾರತದ ಮೇಜರ್ (ನಿವೃತ್ತ) ಗೌರವ್ ಆರ್ಯ ಟ್ವೀಟ್ ಮಾಡಿದ್ದಾರೆ.
ಚೀನಾದ ಬಳಿ ಪಾಕಿಸ್ತಾನ ಸರ್ಕಾರ ಮೆಡಿಕಲ್ ರಕ್ಷಣಾ ವಸ್ತ್ರ, ಮಾಸ್ಕ್,ಟೆಸ್ಟಿಂಗ್ ಕಿಟ್,ವೆಂಟಿಲೇಟರ್ ನೀಡಲು ಮನವಿ ಮಾಡಿತ್ತು. ಹಾಗೆಯೇ ಕೊರೊನಾ ಭೀತಿಯಿಂದಾಗಿ ಪಾಕಿಸ್ತಾನ ಚೀನಾದ ಗಡಿಯನ್ನು ಬಂದ್ ಮಾಡಿದ್ದು ಅದನ್ನು ತೆರೆಯುವಂತೆ ಚೀನಾ ಆಗ್ರಹ ಮಾಡಿತ್ತು.