ಲಂಡನ್, ಏ 05 (Daijiworld News/MSP): ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಗರ್ಭಿಣಿ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಕೊರೊನಾದಿಂದ ಬಳಲುತ್ತಿದ್ದು, ಇದರ ಪರಿಣಾಮ ಬೋರಿಸ್ ಜಾನ್ಸನ್ ಕೊರೊನಾ ತಗುಲಿದ್ದು ಇಬ್ಬರು ಐಸೋಲೇಶನ್ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ.
ಗರ್ಭಿಣಿಯಾಗಿರುವ ಕ್ಯಾರಿಸ್ ಕಳೆದೊಂದು ವಾರದಿಂದ ಕೊರೊನಾ ಪೀಡತೆಯಾಗಿ ಹಾಸಿಗೆಯ ಮೇಲೆಯೇ ವಿಶ್ರಾಂತಿ ಪಡೆಯುವಂತಾಗಿತ್ತು.
ಇನ್ನು ನನ್ನಲ್ಲೂ ಕಳೆದ ವಾರವಷ್ಟೇ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂತು. ಜ್ವರದಿಂದಾಗಿ ತೀರ ಬಳಲಿದ್ದೆ. ಒಂದು ವಾರ ಸರಿಯಾಗಿ ವಿಶ್ರಾಂತಿ ತೆಗೆದುಕೊಂಡೆ. ಈಗ ಕಾಯಿಲೆ ಗುಣಮುಖನಾಗುತ್ತಿದ್ದೇನೆ. ಇನ್ನು ವಿಶೇಷ ಪರೀಕ್ಷೆ ಅಗತ್ಯವಿಲ್ಲ. ಸ್ಟ್ರಾಂಗ್ ಆಗಿದ್ದೇನೆ ಎಂದು ಕ್ಯಾರಿಸ್ ಹೇಳಿದ್ದಾರೆ.
ಇನ್ನು ಕ್ಯಾರಿಸ್ ಕೂಡಾ ಕೊರೊನಾ ಬಗ್ಗೆ ಹೇಳಿದ್ದು, ಗರ್ಭಿಣಿಯಾಗಿರುವ ನನಗೆ ಕರೊನಾ ಸೋಂಕು ತಗುಲಿದ ವಿಚಾರ ತಿಳಿದು ಗಾಬರಿ ಹಾಗೂ ಆತಂಕವಾಯಿತು. ತಕ್ಷಣ ಎಚ್ಚೆತ್ತು ವೈದ್ಯಕೀಯ ಸಲಹೆ, ಸೂಚನೆಗಳನ್ನು ಕಿಂಚಿತ್ತು ತಪ್ಪದೆ ಪಾಲಿಸಿದೆ. ಗರ್ಭಿಣಿಯರು ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದಾರೆ.
ಬ್ರಿಟಿಷ್ ಪ್ರದಾನಿ ಬೋರಿಸ್ ಜಾನ್ಸಬ್ (55) ಹಾಗೂ ಕ್ಯಾರಿಸ್ ಸೈಮಂಡ್ಸ್(35) ಇಬ್ಬರಿಗೂ ಇನ್ನೂ ವಿವಾಹವಾಗಿಲ್ಲ.