ವುಹಾನ್, ಎ.08 (Daijiworld News/MB) : ಕೊರೊನಾ ಸೋಂಕು ವಿಶ್ವದಲ್ಲೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಎರಡು ತಿಂಗಳಿಗೂ ಅಧಿಕ ಕಾಲದಿಂದ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧವನ್ನು ಬುಧವಾರ ತೆರವುಗೊಳಿಸಲಾಗಿದೆ.
ತೆರವುಗೊಂಡ ಬಳಿಕವೇ ಇಂದು ಬೆಳಗ್ಗೆ ಸಾವಿರಾರು ಮಂದಿ ಪ್ರಯಾಣಿಕರು ಬೇರೆ ಬೇರೆ ಕಡೆ ಪ್ರಯಾಣ ಆರಂಭಿಸಿದ್ದಾರೆ.
ಇಲ್ಲಿ ಕಳೆದ ಜನವರಿಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಕೊರೊನಾ ವ್ಯಾಪಕವಾಗಿ ಹರಡಲು ಆರಂಭವಾದ ಕಾರಣ ಚೀನಾ ಸರ್ಕಾರ ಅಲ್ಲಿರುವ ಪ್ರಜೆಗಳು ಬೇರೆ ದೇಶಗಳಿಗೆ ಪ್ರಯಾಣ ಮಾಡುವುದು ಮತ್ತು ಬೇರೆ ದೇಶದಿಂದ ಚೀನಾಕ್ಕೆ ಸಂಚಾರ ಮಾಡುವುದಕ್ಕೂ ನಿರ್ಬಂಧ ಹೇರಿತ್ತು.
ಇಂದು ಬೆಳಗ್ಗೆ ಸಾವಿರಾರು ಜನರು ವುಚಂಗ್ ಸ್ಟೇಷನ್ ಗೆ ಬಂದು ಬೇರೆ ಬೇರೆ ಕಡೆಗಳಿಗೆ ತೆರಳಲು ರೈಲು ಹತ್ತುವ ದೃಶ್ಯ ಕಂಡುಬಂತು.
ಇನ್ನು ಚೀನಾದಲ್ಲಿ ಜನವರಿ ಬಳಿಕ ಕೊರೊನಾದಿಂದಾಗಿ ಒಂದು ಸಾವು ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.