ಲಂಡನ್, ಏ 10 (Daijiworld News/MSP): ಕೊರೊನಾ ವೈರಸ್ ನಿಂದ ತೀವ್ರವಾಗಿ ಅನಾರೋಗ್ಯಕ್ಕೀಡಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಅವರ ಆರೋಗ್ಯ ಕೊಂಚ ಸುಧಾರಣೆ ಕಂಡುಬಂದಿದ್ದು, ಹೀಗಾಗಿ ಅವರನ್ನು ತುರ್ತು ನಿಗಾ ಘಟಕದಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
55ರ ಹರೆಯದ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲಿ ಕೋವಿಡ್ 19 ವೈರಸ್ ದೃಢಪಟ್ಟಿದ್ದರಿಂದ ಸೆಲ್ಫ್ ಕ್ವಾರಂಟೈನ್ ಗೆ ಅವರು ಒಳಗಾಗಿದ್ದರು, ಆದರೆ ಕಳೆದ ಭಾನುವಾರ ಸಂಜೆ ವಿಪರೀತ ಜ್ವರದ ಕಾರಣ ಲಂಡನ್ ನ ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಐಸಿಯುಗೆ ಅವರನ್ನು ಶಿಫ್ಟ್ ಮಾಡಲಾಗಿದೆ
ಬೋರಿಸ್ ಜಾನ್ಸನ್ ಅವರು ಆರೋಗ್ಯ ಸ್ಥಿತಿಗತಿ ಬಗ್ಗೆ ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಮಾಹಿತಿ ಹಂಚಿಕೊಂಡಿದ್ದು, , ಪ್ರಧಾನಿಯವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ ಎಂದಿದ್ದಾರೆ.
ಬೋರಿಸ್ ಅವರ ಗರ್ಭಿಣಿ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರು ಕೊರೊನಾದಿಂದ ಬಳಲುತ್ತಿದ್ದು, ಇದರ ಪರಿಣಾಮ ಬೋರಿಸ್ ಜಾನ್ಸನ್ ಕೊರೊನಾ ತಗುಲಿತ್ತು. ಆದರೆ ಕ್ಯಾರಿ ಸೈಮಂಡ್ಸ್ ಗುಣಮುಖರಾಗಿದ್ದು ವಿಶ್ರಾಂತಿಯಲ್ಲಿದ್ದಾರೆ.
ಈ ನಡುವೆ ಬ್ರಿಟನ್ ನಲ್ಲಿ ಮುಂದಿನ ಹಲವು ವಾರಗಳ ವರೆಗೂ ಲಾಕ್ ಡೌನ್ ಮುಂದುವರೆಸಲಾಗುತ್ತದೆ ಎಂದು ಸರ್ಕಾರದ ವರದಿ ತಿಳಿಸಿದೆ.