ವಾಷಿಂಗ್ಟನ್, ಎ.10 (Daijiworld News/MB) : ಪ್ರಪಂಚದಾದ್ಯಂತ ತನ್ನ ಜನರ ಮಾರಣಹೋಮಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಪತ್ತೆಯಾಗಿ ನೂರು ದಿನಗಳು ಪೂರ್ಣಗೊಂಡಿದ್ದು ಸಾವಿನ ಸಂಖ್ಯೆ ಲಕ್ಷದತ್ತ ಸಾಗುತ್ತಿದೆ. ಈ ಕೊರೊನಾ ವೈರಸ್ ಪತ್ತೆಯಾಗಿ 100 ದಿನಗಳು ಪೂರ್ಣಗೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತಿಳಿಸಿದೆ.
ಶುಕ್ರವಾರದವರೆಗೆ ಜಗತ್ತಿನಾದ್ಯಂತ 16,01,018 ಜನರಿಗೆ ಸೋಂಕು ದೃಢಪಟ್ಟಿದ್ದು 95,718 ಜನ ಮೃತಪಟ್ಟಿದ್ದಾರೆ. 3,54,972 ಜನ ಗುಣಮುಖರಾಗಿದ್ದಾರೆ.
ಈ ಕುರಿತಾಗಿ ಫೇಸ್ಬುಕ್ನಲ್ಲಿ ಡಬ್ಲ್ಯುಎಚ್ಒ ಪ್ರಕಟಣೆ ಬಿಡುಗಡೆ ಮಾಡಿದ್ದು ಅದರಲ್ಲಿ ಕೊರೊನಾದಿಂದ ಜನರ ಜೀವವನ್ನು ಉಳಿಸಲು ಸಹಾಯ ಮಾಡಲು ಡಬ್ಲ್ಯುಎಚ್ಒ ಸದಾ ಬದ್ಧವಾಗಿದೆ. ನಿಖರ ಮಾಹಿತಿ ನೀಡಲು, ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶಗಳಿಗೆ ನೆರವು ನೀಡಲು, ವೈದ್ಯಕೀಯ ಉಪಕರಣಗಳು ಮತ್ತು ಔಷಧ ಪೂರೈಸಲು ಸದಾ ಸಿದ್ಧವಿದೆ. ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವಿಕೆ ಹಾಗೂ ಅವರನ್ನು ಸಜ್ಜುಗೊಳಿಸಲೂ ನೆರವು ನೀಡಲಿದೆ" ಎಂದು ತಿಳಿಸಿದೆ.
ಹಾಗೆಯೇ ಕೊರೊನಾ ಮೊದಲು ಪತ್ತೆಯಾಗಿ ನೂರು ದಿನಗಳು ಆದ ಹಿನ್ನಲೆಯಲ್ಲಿ ವಿಡಿಯೊವೊಂದನ್ನೂ ಬಿಡುಗಡೆಗೊಳಿಸಿದೆ.