ವ್ವಾಷಿಂಗ್ಟನ್, ಏ 11 (Daijiworld News/MSP): : ಕೊರೋನಾ ವೈರಾಣು ಬಾಧೆಯಿಂದ ಅಮೇರಿಕಾ ನಲುಗಿ ಹೋಗಿದ್ದು, ಒಂದೇ ದಿನ 2 ಸಾವಿರ ಜನ ಮೃತಪಟ್ಟಿದ್ದಾರೆ. ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಾಣುವಿಗೆ ಜಗತ್ತಿನಾದ್ಯಂತ ಆವರಿಸಿದ್ದು, ಅಮೇರಿಕಾದಂತಹ ಬಲಿಷ್ಟ ರಾಷ್ಟ್ರವೇ ವೈರಸ್ನಿಂದ ನಲುಗಿ ಹೋಗಿದೆ.
ಶುಕ್ರವಾರ ಒಂದೇ ದಿನ 2,108 ಜನ ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯ ತನ್ನ ವರದಿಯಲ್ಲಿ ತಿಳಿಸಿದೆ. ಕೊರೊನಾ ಪೀಡಿತರ ಪ್ರಮಾಣದಲ್ಲೂ ಭಾರೀ ಹೆಚ್ಚಳ ಕಂಡುಬಂದಿದ್ದು, 5 ಲಕ್ಷದ ಗಡಿ ದಾಟಿದೆ. 24 ಗಂಟೆಗಳ ಅವಧಿಯಲ್ಲಿ 35,089 ಜನರಿಗೆ ವೈರಾಣು ತಗುಲಿರುವುದು ದೃಢಪಟ್ಟಿದೆ.
ಇನ್ನೊಂದೆಡೆ ಕೊರೊನಾ ತವರೂರು ಚೀನಾದಲ್ಲಿ ಹೊಸದಾಗಿ 46 ಪ್ರಕರಣಗಳು ವರದಿಯಾಗಿದೆ. ಮಾತ್ರವಲ್ಲದೆ 3 ಜನರು ಮೃತಪ್ಟಿರುವುದು ವರದಿಯಾಗಿದೆ.