ನವದೆಹಲಿ, ಎ.11 (DaijiworldNews/PY) : ಸಾರ್ಕ್ ನ ಪ್ರತಿಯೊಂದು ಸದಸ್ಯ ರಾಷ್ಟ್ರವೂ ಕೊರೊನಾ ವೈರಸ್ ಸೋಂಕಿನ ವಿರುದ್ದ ಹೇಗೆ ಒಗ್ಗಟ್ಟಿನಿಂದ ಹೋರಾಡುತ್ತಿವೆ ಎಂಬುದನ್ನು ಆಯಾ ರಾಷ್ಟ್ರಗಳ ವರ್ತನೆಯೇ ತೋರಿಸುತ್ತದೆ ಎನ್ನುವ ಮೂಲಕ ಪಾಕ್ಗೆ ಭಾರತ ಪರೋಕ್ಷವಾಗಿ ತಿರುಗೇಟು ನೀಡಿದೆ.
ಪ್ರಧಾನಿ ಮೋದಿ ಅವರ ಕರೆಯಂತೆ ಸಾರ್ಕ್ ಕೊರೊನಾ ವೈರಸ್ ತುರ್ತು ನಿಧಿಗೆ 3 ಮಿಲಿಯನ್ ಡಾಲರ್ ನೀಡುವುದಾಗಿ ಗುರುವಾರ ಘೋಷಿಸಿ, ಒಕ್ಕೂಟದ ಒಗ್ಗಟ್ಟಿನೊಳಗೇ ಸೋಂಕಿಗೆ ಸಂಬಂಧಿಸಿದಂತೆ ಕೈಗೊಳ್ಳುವ ಯಾವುದೇ ಕ್ರಮಗಳು ಇರಬೇಕು ಎನ್ನುವ ಬೇಡಿಕೆ ಇಟ್ಟಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಭೂತಾನ್, ಮಾಲ್ಡೀವ್ಸ್, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ಸೇರಿ ಆರಂಭದಲ್ಲೇ ಎಲ್ಲಾ ಸಾರ್ಕ್ ರಾಷ್ಟ್ರಗಳು ತುರ್ತು ನಿಧಿಗೆ ತಮ್ಮ ಕೊಡುಗೆ ನೀಡಿವೆ. ಪ್ರಧಾನಿಯವರು ಹೇಳಿದ ಕೂಡಲೇ ಭಾರತ ಕೂಡಾ ಹಣ ಬಿಡುಗಡೆ ಮಾಡಿದೆ.
ಈ ಸಲುವಾಗಿ ಪಾಕಿಸ್ತಾನದ ವರ್ತನೆಯು ಸೋಂಕಿನ ವಿರುದ್ದ ಅವರ ಹೋರಾಟದ ಗಂಭೀರತೆಯನ್ನು ತೋರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.