ಲಂಡನ್, ಎ.12 (Daijiworld News/MB) : ಕೊರೊನಾ ವೈರಸ್ಗೆ ಸೆಪ್ಟಂಬರ್ ವೇಳೆಗೆ ಲಸಿಕೆ ಸಿದ್ಧವಾಗಬಹುದು ಎಂದು ಬ್ರಿಟನ್ನ ಔಷಧ ಸಂಶೋಧನಾ ತಂಡಗಳ ಪೈಕಿ ಮುಂಚೂಣಿಯಲ್ಲಿರುವ ತಂಡವೊಂದರ ಮುಖ್ಯಸ್ಥೆ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ನನಗೆ ಈ ಔಷಧವು ಪರಿಣಾಮಕಾರಿಯಾಗುತ್ತದೆ ಎಂಬ 80 ಶೇಕಡ ವಿಶ್ವಾಸವಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಲಸಿಕೆ ಶಾಸ್ತ್ರದ ಪ್ರೊಫೆಸರ್ ಆಗಿರುವ ವಿಜ್ಞಾನಿ ಸಾರಾ ಗಿಲ್ಬರ್ಟ್ ಪತ್ರಕೆಯೊಂದಕ್ಕೆ ತಿಳಿಸಿದ್ದಾರೆ.
ಲಸಿಕೆಗಳ ಸಂಶೋಧನೆಗೆ ವರ್ಷಗಳೇ ಬೇಕಾಗುತ್ತದೆ. ಹಾಗೂ ಕೊರೊನಾ ವೈರಸ್ಗೆ ಲಸಿಕೆ ಕಂಡು ಹಿಡಿಯಲು ಕನಿಷ್ಠ ೧೨ ರಿಂದ ೧೮ ತಿಂಗಳುಗಳು ಬೇಕಾಗಬಹುದು ಎಂದು ಪರಿಣಿತರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವದಾದ್ಯಂತ ಈ ಕೊರೊನಾ ವೈರಸ್ಗೆ ಲಸಿಕೆ ಕಂಡು ಹುಡುಕಲೆಂದು ಹಲವಾರು ಜನರು ಶ್ರಮಿಸುತ್ತಿದ್ದು ಈ ಪೈಕಿ ಗಿಲ್ಬರ್ಟ್ರ ತಂಡವೂ ಕೂಡಾ ಒಂದಾಗಿದೆ.
ಇನ್ನೆರಡು ವಾರಗಳಲ್ಲಿ ಈ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.