ರಿಯಾದ್, ಏ 13 (Daijiworld News/MSP): ಚೀನಾದಲ್ಲಿ ಹುಟ್ಟಿದ ರಕ್ಕಸ ಕೊರೊನಾ ವೈರಸ್ ಗೆ ಪ್ರಪಂಚವೇ ನಲುಗಿ ಹೋಗಿದ್ದು, ಇದೀಗ ಕೊರೊನಾ ಕಪಿಮುಷ್ಟಿಯಲ್ಲಿ ಸೌದಿ ಅರೇಬಿಯಾದ ರಾಜಪರಿವಾರ ಸಿಲುಕಿದೆ.
ಜಗತ್ತಿನ ತೈಲ ಸಮೃದ್ಧ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ರಾಜಪರಿವಾರದ ಸುಮಾರು 150ಕ್ಕೂ ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ದೊರೆ ಸಲ್ಮಾನ್ ಮತ್ತು ರಾಜಕುಮಾರ ಮಹಮ್ಮದ್ ಸಲ್ಮಾನ್ ಸೇರಿದಂತೆ ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಐಸೊಲೇಷನ್ನಲ್ಲಿರಿಸಿ ತೀವ್ರ ನಿಗಾ ವಹಿಸಿದೆ.
ಸೌದಿ ಅರೇಬಿಯಾದಲ್ಲಿ ಸದ್ದಿಲ್ಲದೆ ಹಬ್ಬಿದ ಮಹಾಮಾರಿ ಕೊರೊನಾದಿಂದ ದೊರೆ ಸಲ್ಮಾನ್ ಆದೇಶದಂತೆ ಮೆಕ್ಕಾ ಮತ್ತು ಮದೀನಾದ ಪವಿತ್ರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಈಗಾಗಲೇ ದೊರೆ ಸಲ್ಮಾನ್ರ ಅವರ ಹತ್ತಿರ ಸಂಬಂಧಿ ಮತ್ತು ರಿಯಾದ್ ಸರ್ಕಾರದ ಮುಖ್ಯಸ್ಥರಾದ ಫೈಸಲ್ ಬಿನ್ ಬಂದರ್ ಬಿನ್ ಅಬ್ದುಲ್ ಜೀಜ್ ಅವರಿಗೆ ಕೋವಿಡ್ -೧೯ ಸೋಂಕು ದೃಢಪಟ್ಟಿದ್ದು, ಅವರನು ನಿಗಾದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತೈಲ ಸಾಮ್ರಾಟರಾಗಿ ಮೇರೆಯುತ್ತಿರುವ ರಾಜ ಪರಿವಾರಕ್ಕೆ ಕೊರೊನಾ ತಗುಲಿರುವುದರಿಂದ ಸೌದಿ ಅರೇಬಿಯಾದ ಜನತೆ ಮತ್ತಷ್ಟು ಹೆದರಿ ಕಂಗಾಲಾಗಿದ್ದಾರೆ.