ನ್ಯೂಯಾರ್ಕ್, ಎ.14 (Daijiworld News/MB) : ಜಗತ್ತಿನಾದ್ಯಂತ ಕೊರೊನಾ ಮರಣ ಮೃದಂಗ ಹೆಚ್ಚುತ್ತಲ್ಲೇ ಇದ್ದು ವಿಶ್ವದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 1,19,699 ಕ್ಕೆ ಏರಿಕೆಯಾಗಿದೆ. ಹಾಗೆಯೇ ಸೋಂಕಿತರ ಸಂಖ್ಯೆಯು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು 19,25,138 ಜನರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.
ವಿಶ್ವದ ದೊಡ್ಡಣ್ಣ ಅಮೆರಿಕಾ ಈ ಮೊದಲು ಅತೀ ಹೆಚ್ಚು ಕೊರೊನಾ ಪ್ರಕರಣಗಳಿಂದ ನಲುಗಿದ್ದ ಇಟಲಿಯನ್ನು ಹಿಂದಿಕ್ಕಿದ್ದು ಈ ಸೋಂಕಿನಿಂದಾಗಿ ತತ್ತರಿಸಿ ಹೋಗಿದೆ. ಜಗತ್ತಿನಲ್ಲೇ ಅತೀ ಹೆಚ್ಚು ಜನರು ಅಮೆರಿಕದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.
ವೈರಸ್ ಕಾಣಿಸಿಕೊಂಡ ಆರಂಭದಲ್ಲೇ ಹಲವು ದೇಶಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಅಮೆರಿಕ ಆರಂಭದಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ 23,644 ಜನರು ಮೃತಪಟ್ಟಿದ್ದು ಸೋಂಕಿತರ ಸಂಖ್ಯೆ 5.87 ಲಕ್ಷ ದಾಟಿದೆ. ಅದರಲ್ಲೂ ಮುಖ್ಯವಾಗಿ ನ್ಯೂಯಾರ್ಕ್ನಲ್ಲೇ ಅಧಿಕ ಪ್ರಕರಣಗಳು ದೃಢಪಟ್ಟಿದೆ.
ಸ್ಪೇನ್ನಲ್ಲಿಯೂ ಕೊರೊನಾ ಪ್ರಕರಣಗಳು ಅಧಿಕವಾಗುತ್ತಿದ್ದು 1,70,099 ಜನರಲ್ಲಿ ಸೋಂಕು ದೃಢಪಟ್ಟಿದ್ದು 17,756 ಜನರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 1,59,516 ಜನರಿಗೆ ಸೋಂಕು ತಗುಲಿದ್ದು ಮೃತರ ಸಂಖ್ಯೆ 20 ಸಾವಿರದ ಗಡಿಗೆ ಸಮೀಪಿಸಿದೆ.
ಭಾರತದಲ್ಲಿಯೂ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲ್ಲೇ ಇದ್ದು ಒಂದು ದಿನದಲ್ಲಿ ಸುಮಾರು 796 ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು 339 ಮಂದಿ ಸಾವನ್ನಪ್ಪಿದ್ದಾರೆ.