ವಾಷಿಂಗ್ಟನ್, ಏ15 (Daijiworld News/MSP): ಕೊರೊನಾ ವೈರಸ್ ಅಮೆರಿಕಾದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 2,600 ಮಂದಿ ಸಾವಿಗೀಡಾಗಿದ್ದಾರೆ. ಅಮೇರಿಕಾದಲ್ಲಿ ಈವರೆಗೆ ಒಟ್ಟಾರೆಯಾಗಿ ಅಮೆರಿಕಾದಲ್ಲಿ 6,19,331 ಮಂದಿಗೆ ಸೋಂಕು ದೃಢಪಟ್ಟಿದ್ದು, 27,176 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ ಪರಿಸ್ಥಿತಿ ನಮ್ಮ ಕೈ ಮೀರಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿಯೂ ಸರ್ಕಾರಕ್ಕೆ ವೈರಸ್ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರೂ ಶೀಘ್ರದಲ್ಲೇ ವಾಣಿಜ್ಯ ಚಟುವಟಿಕೆ ಸಹಜಸ್ಥಿತಿ ಮರಳಲಿದೆ ಎಂಬ ಆಶಯವನ್ನು ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಅಮೇರಿಕನ್ನರು ಎಲ್ಲ ನೋವು ,ತೊಂದರೆ, ಕಷ್ಟಗಳನ್ನು ಅನುಭವಿಸಿದರೂ, ಶೀಘ್ರ ಈ ಪರಿಸ್ಥಿತಿಯಿಂದ ಹೊರಬಂದು ಕೊರೊನಾ ವೈರಸ್ನ್ನು ನಿರ್ನಾಮ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಕೊರೊನಾ ಹರಡುವಿಕೆಯ ಪ್ರಮಾಣ ಇನ್ನು ಹಂತ ಹಂತವಾಗಿ ಕಡಿಮೆಯಾಗುತ್ತಾ ಬರಲಿದ್ದು, ಇದಕ್ಕೆ ಪೂರಕವಾಗಿ ನಾವು ಆರ್ಥಿಕ ಚಟುವಟಿಕೆಗಳನ್ನೂ ಹಂತ ಹಂತವಾಗಿ ಪುನರಾರಂಭಿಸಬೇಕಿದೆ. ಕೆಲವು ರಾಜ್ಯಗಳಲ್ಲಿ ಜನಜೀವನ ಮೊದಲಿನಂತೆ ನಡೆಯಲಿದೆ ದೇಶದ ಆರ್ಥಿಕ ಚಟುವಟಿಕೆ ಮತ್ತೆ ಆರಂಭಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.