ವಾಷಿಂಗ್ಟನ್, ಎ.17 (DaijiworldNews/PY) : ವೀಸಾಕ್ಕೆ ಸಂಬಂಧಿಸಿದ ಕಠಿಣ ನಿಯಮಗಳು ಕೂಡಾ ಕೊರೊನಾದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಅಡ್ಡಿಪಡಿಸುತ್ತಿವೆ ಎಂದು ಅಮೆರಿಕದ ಸಂಸದರು ತಿಳಿಸಿದ್ದಾರೆ.
ಎಚ್–1ಬಿ ಮತ್ತು ಜೆ–1 ವೀಸಾ ಪಡೆದು ಭಾರತದವರು ಸೇರಿದಂತೆ ವಿವಿಧ ದೇಶಗಳ ವೈದ್ಯರು ಅಮೆರಿಕದಲ್ಲಿದ್ದಾರೆ. ಆದರೆ, ವೀಸಾ ನಿಯಮವು ಕಠಿಣವಾದ್ದರಿಂದ ಕೊರೊನಾನಿಂದ ಬಳಲುತ್ತಿರುವವರಿಗೆ ಅವರಿಂದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ.
ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ವೇಳೆ ಎಲ್ಲರಿಗೂ ತುರ್ತು ವೈದ್ಯಕೀಯ ಸೇವೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ವೀಸಾ ನಿಯಮಗಳನ್ನು ಸಡಿಲಿಸುವ ಮೂಲಕ ಅಗತ್ಯವಿರುವ ಎಲ್ಲರಿಗೂ ವೈದ್ಯಕೀಯ ಸೇವೆ ದೊರಕುವಂತಾಗಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.
ಅಮೆರಿಕಲ್ಲಿ ಭಾರತೀಯರು ಸೇರಿದಂತೆ ಸದ್ಯ ನೆಲೆಸಿರುವ ವಿದೇಶಿಯರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಉಭಯ ಪಕ್ಷಗಳಿಗೆ ಸೇರಿದ ೪೦ಕ್ಕೂಅಧಿಕ ಸಂಸದರು ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ ಹಂಗಾಮಿ ನಿರ್ದೇಶಕ ಕೆನ್ಕಕಿನೆಲ್ಲಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ಸದ್ಯ ನೆಲೆಸಿರುವ ವಿದೇಶಿಯರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಉಭಯ ಪಕ್ಷಗಳಿಗೆ ಸೇರಿದ 40ಕ್ಕೂ ಹೆಚ್ಚು ಸಂಸದರು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್ಸಿಐಎಸ್) ಹಂಗಾಮಿ ನಿರ್ದೇಶಕ ಕೆನ್ ಕಕಿನೆಲ್ಲಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.