ವಾಷಿಂಗ್ಟನ್, ಎ.17 (DaijiworldNews/PY) : ಅಮೆರಿಕ ಪುನರಾರಂಭಗೊಳಿಸಲು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕೊರೊನಾ ಲಾಕ್ಡೌನ್ ತೆರವುಗೊಳಿಸಲು ಮೂರು ಹಂತಗಳ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಬಹಿರಂಗ ಪಡಿಸಿದ್ದಾರೆ.
ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಕಳೆದ ೨೪ ಗಂಟೆಗಳಲ್ಲಿ 2,494 ಮಂದಿ ಮೃತಪಟ್ಟಿದ್ದಾರೆ. ಗುರುವಾರ ಸಂಜೆಯವರೆಗೂ 6,58,263 ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು ದಾಖಲಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 33,000ದ ಗಡಿ ದಾಟಿದೆ.
ಈ ಹೊಸ ಮಾಘಸೂಚಿಯನ್ನು ನನ್ನ ಆಡಳಿತದಿಂದ ಪ್ರಕಟಿಸುತ್ತಿದ್ದು, ಆ ಮೂಲಕ ತಮ್ಮ ರಾಜ್ಯಗಳಲ್ಲಿ ಗವರ್ನರ್ಗಳು ಹಂತ ಹಂತವಾಗಿ ಕಾರ್ಯಾಚರಣೆ ಪುನರಾರಂಭ ಮಾಡಲು ಅನುವಾಗಿದೆ ಎಂದು ಟ್ರಂಪ್ ಹೇಳಿರುವುದಾಗಿ ವರದಿ ತಿಳಿಸಿದೆ.
ಹೊಸ ರ್ಮಾಸೂಚಿಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಬಗ್ಗೆ ಪ್ರಸ್ತಾಪಮಾಡಿಲ್ಲ. ಡೊನಾಲ್ಡ್ ಟ್ರಂಪ್ ಅವರು ಗವರ್ನರ್ಗಳೊಂದಿಗೆ ಓಪನಿಂಗ್ ಅಪ್ ಅಮೆರಿಕ ಹೆಸರಿನ ದಾಖಲೆಯನ್ನು ಹಂಚಿಕೊಂಡಿದ್ದು, ಆ ದಾಖಲೆಯಲ್ಲಿ ಅಮೆರಿಕ ಮತ್ತೆ ಕಾಯಚರಣೆಗೆ ಅನುಸರಿಸಬೇಕಾದ ಮೂರು ಹಂತಗಳ ಯೋಜನೆಯ ವಿವರಗಳನ್ನು ಒಳಗೊಂಡಿದೆ. ಲಾಕ್ಡೌನ್ ಅನ್ನು ಹಂತ ಹಂತವಾಗಿ ಸಡಿಲಗೊಳಿಸುವ ಮೊದಲು ಕೊರೊನಾ ಪ್ರಕರಣಗಳು ನಿಗದಿತ ಪ್ರದೇಶದಲ್ಲಿ ಕಡಿಮೆಯಾಗಬೇಕು .
ಜನರು ಮೊದಲ ಹಂತದ ಸಡಿಲಿಕೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಮುಂದುವರಿಸಬೇಕು ಹಾಗೂ 10ಕ್ಕಿಂತ ಅಧಿಕ ಜನರು ಒಟ್ಟಿಗೆ ಸೇರುವಂತಿಲ್ಲ. ಸೋಂಕು ಲಕ್ಷಣಗಳಿರುವವರು ಮನೆಯಿಂದ ಹೊರಗೆ ಬರುವಂತಿಲ್ಲ. ಅನಗತ್ಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮುಂದಿನ ಮೂರು ಹಂತಗಳಲ್ಲಿ, ಗುಂಪುಗಳಲ್ಲಿ ಹಾಗೂ ಸಾರ್ವಜನಿಕ ಮಾತುಕತೆ ಸಮಯವನ್ನು ಕನಿಷ್ಟ ಸಮಯಕ್ಕೆ ಸೀಮಿತಪಡಿಸಬೇಕು.
ಅಧಕಿ ಜನ ಸೇರುವ ಸ್ಥಳಗಳು, ಬಾರ್ಗಳು ಹಾಗೂ ಜಿಮ್ಗಳು ಕೊರೊನಾಕ್ಕೂ ಮುನ್ನು ನಡೆಸುತ್ತಿದ್ದ ಕಾರ್ಯಾಚರಣೆಗಳಿಗಿಂತ ಭಿನ್ನ ವ್ಯವಸ್ಥೆಗಳನ್ನು ಸಿದ್ದಪಡಿಸಬೇಕು. ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳುವ ಮುಖಾಂತರ ಕೊರಿನಾ ಸೋಂಕು ತಗುಲದಂತೆ ಹಾಗೂ ಹರಡದಂತೆ ನಿಯಂತ್ರಿಸುವತ್ತ ಗಮನಹರಿಸಬೇಕು.