ವಾಷಿಂಗ್ಟನ್, ಎ.18 (Daijiworld News/MB) : ಅಮೆರಿಕದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಹೆಚ್ಚುತ್ತಲ್ಲೇ ಇದ್ದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 36,773 ಕ್ಕೆ ಏರಿಕೆಯಾಗಿದ್ದು ಸೋಂಕಿತರ ಸಂಖ್ಯೆ ಈವರೆಗೆ 7 ಲಕ್ಷದ ಗಡಿ ದಾಟಿದೆ. ವಿಶ್ವದಾದ್ಯಂತ ಕೊರೊನಾದಿಂದಾಗಿ 1,50,000 ಕ್ಕಿಂತ ಹೆಚ್ಚು ಜನರು ಮೃತರಾಗಿದ್ದಾರೆ.
ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಸೋಂಕಿನಿಂದ ಅತೀ ಹೆಚ್ಚು ಜನರು ಸಾವನ್ನಪ್ಪುತ್ತಿದ್ದು ಅಧಿಕ ಕೊರೊನಾ ಪ್ರಕರಣಗಳೂ ಕೂಡಾ ಇಲ್ಲಿಯೇ ದೃಢಪಟ್ಟಿದೆ.
ಇನ್ನು ಇಟಲಿಯಲ್ಲಿ ಸೋಂಕಿನಿಂದಾಗಿ 22,745 ಜನರು ಅಸುನೀಗಿದ್ದು ಸ್ಪೇನ್ನಲ್ಲಿ 19,478 ಫ್ರಾನ್ಸ್ನಲ್ಲಿ 18,681ಸಾವನ್ನಪ್ಪಿದ್ದಾರೆ. ಈ ಸೋಂಕಿಗೆ ಮೊದಲ ಬಲಿಯಾದ 100 ದಿನದಲ್ಲಿ 1,50,000 ಮಂದಿ ಮೃತರಾಗಿದ್ದಾರೆ.
ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯು 1918ರಲ್ಲಿ ಕಂಡು ಬಂದ ಸ್ಪ್ಯಾನಿಷ್ ಫ್ಲೂನಿಂದ ಅತೀ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. 1920ರ ವರೆಗೂ ವ್ಯಾಪಿಸಿದ್ದ ಫ್ಲೂಗೆ ಒಟ್ಟು 2 ಕೋಟಿ ಜನ ಬಲಿಯಾಗಿದ್ದಾರೆ.
ಅಮೆರಿಕದಲ್ಲಿ ಗುರುವಾರ ಒಂದೇ ದಿನದಲ್ಲಿ 4,591 ಜನರು ಕೊರೊನಾಗೆ ಬಲಿಯಾಗಿದ್ದಾರೆ.