ಇಸ್ಲಾಮಾಬಾದ್, ಎ.18 (DaijiworldNews/PY) : ಅಮೆರಿಕವು ಕೊರೊನಾ ವಿರುದ್ದದ ಹೋರಾಟಕ್ಕಾಗಿ ಪಾಕ್ಗೆ 8 ದಶಲಕ್ಷ ಡಾಲರ್ಗಿಂತ ಅಧಿಕ ಮೊತ್ತವನ್ನು ಕೊಡುತ್ತಿರುವುದಾಗಿ ಶುಕ್ರವಾರ ತಿಳಿಸಿದೆ.
ಕೊರೊನಾ ಸೋಂಕು ಪಾಕಿಸ್ತಾನದಲ್ಲಿ 7,000ಕ್ಕೂ ಅಧಿಕ ಜನರಿಗೆ ತಗುಲಿದ್ದು, 130ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಪಾಕಿಸ್ತಾನದೊಂದಿಗೆ ಈ ಮಹಾಮಾರಿ ರೋಗವನ್ನು ಎದುರಿಸಲು ಅಮೆರಿಕ ಕೈ ಜೋಡಿಸಲಿದೆ. ಈ ಹಿನ್ನೆಲೆ ಪಾಕಿಸ್ತಾನ ಸರ್ಕಾರದೊಂದಿಗೆ ಅಮೆರಿಕ ರಾಯಭಾರಿ ಪಾಲ್ ಜೋನ್ಸ್ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ಇಸ್ಲಮಾಬಾದ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ತಿಳಿಸಿದೆ.
ಅಮೆರಿಕವು ಪಾಕಿಸ್ತಾನದಲ್ಲಿ ವ್ಯಾಪಿಸಿರುವ ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ಹಾಗೂ ಸೋಂಕಿತರ ಹಿತ ಕಾಯಲು 8 ದಶಲಕ್ಷ ಡಾಲರ್ ನೆರವಾಗಲಿದೆ ಎಂದು ಅಮೆರಿಕ ತಿಳಿಸಿದೆ.
ಈ ಹಣವನ್ನು ಹಾಟ್ ಸ್ಪಾಟ್ಗಳಲ್ಲಿನ ಜನರನ್ನು ಪರೀಕ್ಷಿಸಲು ಮೂರು ಹೊಸ ಸಂಚಾರಿ ಲ್ಯಾಬ್ಗಳನ್ನು ಒದಗಿಸಬಹುದು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಬಹುದು. ಇದಕ್ಕಾಗಿ 3 ದಶಲಕ್ಷ ಅಮೆರಿಕ ಡಾಲರ್ಗಳು ಖರ್ಚಾಗಬಹುದು. ಅಲ್ಲದೇ ಕೊರೊನಾ ವಿರುದ್ದದ ಹಲವಾರಿ ಕಾರ್ಯಗಳಿಗೆ ಉಪಯೋಗಿಸಬಹುದು. ಖೈಬರ್, ಫಕ್ತುನ್ಖ್ವಾ, ಬಲೂಚಿಸ್ತಾನ, ಇಸ್ಲಾಮಾಬಾದ್, ಸಿಂಧ್, ಪಂಜಾಬ್ನ ಅತ್ಯಾಧುನಿಕ ತುರ್ತು ಕಾರ್ಯಾಚರಣೆ ಕೇಂದ್ರಗಳಿಗೆ ಸುಮಾರು 1 ದಶಲಕ್ಷ ಡಾಲರ್ಗಳನ್ನು ಉಪಯೋಗಿಸಬಹುದು ಎಂಬುದಾಗಿ ಅಮೆರಿಕ ಹೇಳಿದೆ.