ದುಬೈ, ಎ.18 (DaijiworldNews/PY) : ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳನ್ನು ಗೌರವಿಸಲು ಹಾಗೂ ಪ್ರಶಂಸಿಸುವ ಸಲುವಾಗಿ ಯುಎಇ ಎ.17ರಂದು ರಾತ್ರಿ 9 ಗಂಟೆಗೆ ಪ್ರಜೆಗಳಿಗೆ ರಾಷ್ಟ್ರಗೀತೆ ಹಾಡಲು ಕರೆ ನೀಡಿತ್ತು.
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎ.5ರಂದು ದೀಪ ಪ್ರಜ್ವಲನೆಗೆ ಕರೆ ನೀಡಿದ್ದು, ದೇಶದಾತ್ಯಂತ ಯಶಸ್ವಿಯಾಗಿತ್ತು, ಪ್ರಧಾನಿ ಮೋದಿ ಅವರ ಕರೆಗೆ ಓಗೊಟ್ಟು ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಎಲ್ಲಾ ಗಣ್ಯರು ದೀಪ ಬೆಳಗಿಸಿದ್ದಾರೆ.
ಅದೇ ರೀತಿಯಾಗಿ ಇದೀಗ ಯುಎಇಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ನಿರ್ದಿಷ್ಟ ಸಮಯದಲ್ಲಿ ಎಲ್ಲರೂ ರಾಷ್ಟ್ರಗೀತೆ ಹಾಡಲು ಸೂಚನೆ ನೀಡಿದ್ದಾರೆ.
ಲಾಂಗ್ ಲೈವ್ ಮೈ ಕಂಟ್ರಿ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರ ಬಗ್ಗೆ ನಿವಾಸಿಗಳ ಪರಿಶ್ರಮವನ್ನು ಗೌರವಿಸುವ ಉದ್ದೇಶದಿಂದ ಯುಎಇಯಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತದೆ. ಬುಧವಾರ ಈ ಬಗ್ಗೆ ಮೊದಲ ಕಾರ್ಯಕ್ರಮ ನಡೆದಿದ್ದು, ಯುಎಇ ನಿವಾಸಿಗಳು ತಮ್ಮ ಬಾಲ್ಕನಿ ಹಾಗೂ ಮನೆಯ ಮುಂದೆ ನಿಂತು ರಾಷ್ಟ್ರಗೀತೆ ಹಾಡಿದ್ದಾರೆ.