ಕೆನಡಾ,ಏ 20 (Daijiworld News/MSP): ಕೊರೊನಾ ದಾಳಿಯಿಂದ ಒಂದೆಡೆ ಕೆನಡಾವು ಕಂಗೆಟ್ಟಿದ್ದರೆ, ಇನ್ನೊಂದೆಡೆ ಪೊಲೀಸ್ ಸಮವಸ್ತ್ರ ಧರಿಸಿದ್ದ ಗನ್ ಮ್ಯಾನ್ ನಡೆಸಿದ ದಾಳಿಯಿಂದ ೧೬ ಜನ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸೋವಾ ಸ್ಕೋಟಿಯಾ ಪ್ರಾಂತ್ಯದಲ್ಲಿ ನಡೆದಿದೆ.
ಕೆನಡಾದ ಇತಿಹಾಸದಲ್ಲೇ ಇದು ಅತಿ ಭೀಕರ ಕೃತ್ಯವಾಗಿದ್ದು 30 ವರ್ಷಗಳಲ್ಲೇ ಅತ್ಯಂತ ಭೀಕರ ದಾಳಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರ್ವೆ. ಗುಂಡಿನ ದಾಳಿ ನಡೆಸಿದ ಶಂಕಿತ ಹಂತಕನನ್ನು 51 ವರ್ಷದ ಗೇಬ್ರಿಯಲ್ ವೋರ್ಟ್ಮನ್ ಎಂದು ಗುರುತಿಸಲಾಗಿದ್ದು, ಆತ ಕೂಡಾ ಮೃತಪಟ್ಟಿದ್ದಾನೆ. ದಾಳಿಗೆ ಮೃತಪಟ್ಟವರಲ್ಲಿ ಒಬ್ಬರು ಪೊಲೀಸ್ ಅಧಿಕಾರಿ ಸೇರಿದ್ದಾರೆ.
ಪೊಲೀಸ್ ಯೂನಿಫಾರಂನಲ್ಲಿ ಬಂದಿದ್ದ ಈತ ನೋವಾ ಸ್ಕಾಟಿಯಾದ ಹಾಲಿಫಾಕ್ಸ್ ಬಳಿ ಇರುವ ಪೋರ್ಟಾಪಿಕ್ ಎಂಬ ಪ್ರದೇಶದಲ್ಲಿ ಮನೆಗಳಿಗೆ ನುಗ್ಗಿ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದ. ಇದೀಗ ಹಲವು ಮನೆಯ ಒಳಗೆ ಹಾಗೂ ಹೊರಗೆ ಹಲವು ಮೃತದೇಹಗಳು ಕಂಡುಬಂದಿವೆ.
ಕೊರೊ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದ ಅಂಗವಾಗಿ ಈಗಾಗಲೇ ಲಾಕ್ಡೌನ್ನಲ್ಲಿರುವ ನಗರದಲ್ಲಿ ಎಲ್ಲರೂ ಮನೆಗಳಿಗೆ ಬೀಗ ಜಡಿದು ಬೇಸ್ಮೆಂಟ್ನಲ್ಲಿ ಇರುವಂತೆ ಪೊಲೀಸರು ಸೂಚಿಸಿದ ಹಿನ್ನಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ. ಗುಂಡಿನ ಸದ್ದು ಕೇಳಿ ಓಡಿಬಂದ ಪೊಲೀಸರು, ಅಕ್ಕಪಕ್ಕದವರ ಮೇಲೂ ಮನಬಂದಂತೆ ಗುಂಡು ಹಾರಿಸಿದ್ದ. ದಾಳಿಯಿಂದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೂ ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.