ಇಸ್ಲಮಾಬಾದ್, ಎ.22 (DaijiworldNews/PY) : ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವ ಕೊರೊನಾ ವೈರಸ್ಗೆ ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೂ ಭೀತಿಗೊಳಗಾಗಿದ್ದಾರೆ.
ಪಾಕಿಸ್ತಾನದ ಖ್ಯಾತ ಸಮಾಜ ಸೇವಕ, ಇಧಿ ಪ್ರತಿಷ್ಠಾನದ ಮುಖ್ಯಸ್ಥ ಅಬ್ದುಲ್ ಸತ್ತಾರ್ ಇಧಿ ಅವರ ಪುತ್ರ ಫೈಸಲ್ ಇಧಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿಯೂ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.
ಈ ವಿಚಾರವಾಗಿ ಪಾಕ್ ಪ್ರಧಾನಿ ಅವರ ಆಪ್ತ ವೈದ್ಯ ಡಾ. ಫೈಸಲ್ ಸುಲ್ತಾನ್ ಮಾತನಾಡಿದ್ದು, ಇಮ್ರಾನ್ ಖಾನ್ ಅವರನ್ನು ತಕ್ಷಣವೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಸೂಕ್ತವಾದ ವೈದ್ಯಕೀಯ ಸಲಹೆ ಹಾಗೂ ಪರೀಕ್ಷೆ ನಡೆಸಿ ಪ್ರತ್ಯೇಕವಾಗಿ ಇರುವ ವಿಚಾರವಾಗಿ ಅವರಿಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಇಮ್ರಾನ್ ಖಾನ್ ಅವರು ಕ್ವಾರಂಟೈನ್ನಲ್ಲಿ ಇರಲಿದ್ದಾರೆ ಅಥವಾ ಅಧಿಕೃತ ನಿವಾಸದಿಂದಲೇ ಕಾರ್ಯ ನಿರ್ವಹಿಸಲಿದ್ದಾರೆಯೇ ಎಂಬ ಬಗ್ಗೆ ಆಪ್ತ ವೈದ್ಯರು ತಪಾಸಣೆ ನಡೆಸಿದ ನಂತರ ತಿಳಿಯಲಿದೆ. ಪ್ರಸ್ತುತ ಅವರು ಪ್ರತಿನಿತ್ಯದಂತೆ ಕಾರ್ಯನಿರ್ವಹಿಸಿದ್ದಾರೆ ಹಾಗೆ ಸಂಪುಟ ಸಭೆಯ ನಡೆಸಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಪಾಕ್ನಲ್ಲಿ ಸುಮಾರು 192ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಹಾಗೂ 9 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ.
ಕಳೆದ ವಾರ ಇಮ್ರಾನ್ ಖಾನ್ ಅವರನ್ನು ಫೈಸಲ್ ಪ್ರಧಾನಿ ಭೇಟಿ ಮಾಡಿ ಕೊರೊನಾ ಸಂತ್ರಸ್ತರ ಪರಿಹಾರ ನಿಧಿಗೆ ದೇಣೀಗೆ ನೀಡಲು ಬಂದಿದ್ದರು. ಈ ಬೆನ್ನಲ್ಲೇ ಅಸ್ವಸ್ಥರಾಗಿದ್ದ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಇದೇ ವೇಳೆ ರಂಜಾನ್ ವೇಳೆ ಮಸೀದಿಗಳಿಗೆ 50 ವರ್ಷ ಮೇಲ್ಪಟ್ಟವರು, ಅಪ್ರಾಪ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇಂಥ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.