ಲಂಡನ್, ಎ.23 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಯುಕೆಯಲ್ಲಿರುವ ಭಾರತೀಯರು ಹೆಚ್ಚು ಪೀಡಿತರಾಗಿರುವ ಜನಾಂಗವಾಗಿದ್ದಾರೆ ಎಂದು ಅಧಿಕೃತ ಮಾಹಿತಿಯಿಂದ ಬಹಿರಂಗವಾಗಿದೆ.
ಈ ವಾರ ನ್ಯಾಷನಲ್ ಹೆಲ್ತ್ ಸರ್ವಿಸ್ ಇಂಗ್ಲೆಡ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಯುಕೆ ಆಸ್ಪತ್ರೆಗಳಲ್ಲಿ ಎ.17 ರವರೆಗೆ 13,918 ಸಾವನ್ನಪ್ಪಿದ ಕೊರೊನಾ ರೋಗಿಗಳಲ್ಲಿ, ಶೇ. 16.2 ರಷ್ಟು ಮಂದಿ ಕಪ್ಪು, ಏಷ್ಯನ್ ಹಾಗೂ ಅಲ್ಪಸಂಖ್ಯಾತ ಜನಾಂಗದವರಾಗಿದ್ದಾರೆ. ಅದಲ್ಲದೇ, ಇದರಲ್ಲಿ ಶೇ. 3 ರಷ್ಟು ಮಂದಿ ಭಾರತೀಯ ಜನಾಂಗದವರಿದ್ದು, ಶೇ.2.9 ರಷ್ಟು ಕೆರಿಬಿಯನ್ನರು ಹಾಗೂ ಶೇ.2.1 ಪಾಕಿಸ್ತಾನಿಗಳು ಇದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಅವರು, ನಾವು ಜನಸಂಖ್ಯೆಯ ಆಧಾರದಲ್ಲಿ ನೋಡಿದ್ದೇವೆ. ಎನ್ಎಚ್ಎಸ್ನಲ್ಲಿ ಕೆಲಸ ಮಾಡುವವರಲ್ಲಿ, ಅಲ್ಪಸಂಖ್ಯಾತ ಹಿನ್ನೆಲೆಯವರದ್ದೇ ಅಧಿಕ ಸಾವು ಸಂಭವಿಸಿರುವುದು ನಿಜವಾಗಿಯೂ ಬೇಶರದ ಸಂಗತಿ ಎಂದು ತಿಳಿಸಿದ್ದಾರೆ.
ಒಟ್ಟು ಜನಸಂಖ್ಯೆಯಲ್ಲಿ ಸುಮಾರು 13 ಪ್ರತಿಶತದಷ್ಟು ಭಾವಿಸಿದರೆ, ಬಿಎಎಂಇ ಗುಂಪುಗಳಲ್ಲಿ ಮೃತಪಟ್ಟ ಪ್ರಮಾಣವು ಅಧಿಕವಾಗಿದೆ. ಶೇ.73.6 ಬೀಲಿ ಜನಾಂಗದವರು, ಶೇ.0.7 ಮಿಶ್ರ ಜನಾಂಗ ಎಂದು ಅಂಕಿ-ಅಂಶಗಳ ಪ್ರಕಾರ ಹೇಳುತ್ತಿದೆ. ಶೇ.16.2 ಬಿಎಎಂಇ ವಿಭಾಗದಲ್ಲಿ ಬಾಂಗ್ಲಾದೇಶಕ್ಕೆ ಸೇರಿದವರು ಶೇ.0.6 ಆಗಿದ್ದರೆ, ಶೇ.1.6ರಷ್ಟು ಮಂದಿ ಏಷ್ಯಾ ವಿಭಾಗದವರಾಗಿದ್ದಾರೆ. ಆಫ್ರಿಕನ್ನರು ಶೇ.1.9 ಮಂದಿಯಾದರೆ, ಇನ್ನು ಶೇ.0.9ರಷ್ಟು ಮಂದಿ ಆಫ್ರಿಕಾ ಹೊರತಾದ ಕಪ್ಪು ಜನಾಂಗದವರು, ಶೇ.0.4 ಚೀನಿಯರು ಬೇರೆ ರಾಷ್ಟ್ರದವೆರೆಲ್ಲಾ ಸೇರಿದರೆ ಶೇ.2.8 ಮಂದಿ ಮೃತಪಟ್ಟಿದ್ದಾರೆ.