ವಾಷಿಂಗ್ಟನ್, ಎ.24(DaijiworldNews/PY) : ಅಮೆರಿಕದಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಜನರು ಸಾವನ್ನಪ್ಪುತ್ತಿದ್ದು, ಗುರುವಾರ ಒಂದೇ ಸುಮಾರು 3,100 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮಾರಣಾಂತಿಕಾ ಕೊರೊನಾ ವೈರಸ್ಗೆ ಅಮೆರಿಕದಲ್ಲಿ ಒಟ್ಟಾರೆಯಾಗಿ 49, 845 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಸುಮಾರು 50 ಸಾವಿರದ ಗಡಿ ದಾಟಿದೆ. ಅಲ್ಲದೇ ಸೋಂಕಿತರ ಸಂಖ್ಯೆಯ ಪ್ರಮಾಣವೂ ಹೆಚ್ಚುತ್ತಿದ್ದು, ಈ ಸೋಂಕಿಗೆ ಈಗಾಗಲೇ ಸುಮಾರು 8,80,204 ಬಳಲುತ್ತಿದ್ದಾರೆ. ಈ ಸೋಂಕಿನಿಂದ ಗುಣಮುಖರಾಗಿರುವವರ ಸಂಖ್ಯೆ ಕಡಿಮೆಯಾಗಿದ್ದು, ಕೇವಲ 85 ಸಾವಿರ ಜನರು ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಪೇನ್ನಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, 2 ಲಕ್ಷಕ್ಕಿಂತ ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಮೃತಪಟ್ಟವರ ಸಂಖ್ಯೆ 22,157 ಎಂದು ವರದಿಯಾಗಿದೆ. ಅಲ್ಲದೇ ಇಟಲಿಯಲ್ಲಿಯೂ ಕೊರೊನಾ ತನ್ನ ಮರಣ ಮೃದಂಗ ಬಾರಿಸುತ್ತಿದ್ದು, ಮೃತಪಟ್ಟವರ ಸಂಖ್ಯೆ 25 ಸಾವಿರ ದಾಟಿದ್ದು, ಸೋಂಕಿತರ ಸಂಖ್ಯೆ 1,87,973ಕ್ಕೆ ಎಂದು ವರದಿ ವಿವರಿಸಿದೆ.
ಅಷ್ಟೇ ಅಲ್ಲದೇ ಈ ಮಹಾಮಾರಿ ಕೊರೊನಾ ವೈರಸ್ ಫ್ರಾನ್ಸ್, ಜರ್ಮನಿ, ಇಂಗ್ಲೇಂಡ್ಗೂ ದಾಪುಗಾಲಿಟ್ಟಿದ್ದೆ. ಕೊರೊನಾ ಸೋಂಕಿಗೆ ಜಗತ್ತಿನಾದ್ಯಂತ 27 ಲಕ್ಷಕ್ಕಿಂತ ಅಧಿಕ ಮಂದಿ ಒಳಗಾಗಿದ್ದು, 1.90 ಲಕ್ಷಕ್ಕಿಂತಲೂ ಅಧಿಕ ಮಂದಿ ಕೊರೊನಾ ವೈರಸ್ನಿಂದಾಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.