ವಾಷಿಂಗ್ಟನ್, ಏ 24(Daijiworld News/MSP): ಕೊರೊನಾ ವೈರಸ್ ಹರಡಂತೆ ತಡೆಯುವ ಬಹುನಿರೀಕ್ಷಿತ 'ರೆಮ್ಡೆಸಿವಿಯರ್' ಲಸಿಕೆ ವಿಫಲಗೊಂಡಿದೆ ಎಂದು ವರದಿಯಾಗಿದೆ.
ಅಮೆರಿಕಾದ ಔಷಧ ತಯಾರಿಕಾ ಕಂಪನಿ ಗಿಲಿಯಡ್ ಸೈನ್ಸಸ್ ಇಂಕ್'ನ ಪ್ರಾಯೋಗಿಕ ಔಷಧ 'ರೆಮ್ಡೆಸಿವಿಯರ್' ಮಾನವ ಪ್ರಯೋಗದಲ್ಲಿ ಫಲಪ್ರದವಾಗಿಲ್ಲ ಎಂದು ವರದಿಯು ವಿಶ್ವ ಆರೋಗ್ಯ ಸಂಸ್ಥೆಯ ವೆಬ್'ಸೈಟ್ ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಫೈನಾನ್ಶಿಯಲ್ ಟೈಮ್ ನಲ್ಲಿ ಈ ವರದಿ ಬಿತ್ತರಗೊಂಡಿದೆ.
ಸುದ್ದಿ ಎಲ್ಲೆಡೆ ಹರಿದಾಡತೊಡಗಿದ್ದಂತೆಯೇ ಔಷಧ ತಯಾರಿಕಾ ಕಂಪನಿ ಗಿಲೀಯಡ್ ಸೈನ್ಸಸ್ ಕೂಡಾ ಪೋಸ್ಟ್ ಅನ್ನು ತೆಗೆದುಹಾಕಿದೆ. ವಿಶ್ವದ 130ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಹರಡಿಕೊಂಡಿರುವ ಕಿಲ್ಲರ್ ಕೊರೊನಾ ವೈರಸ್ ಗೆ ಈ ಲಸಿಕೆ ಭರವಸೆ ಮೂಡಿಸಿತ್ತು.
ಫೈನಾನ್ಶಿಯಲ್ ಟೈಮ್ ನಲ್ಲಿ ಸುದ್ದಿಯ ಪ್ರಕಾರ , ಒಟ್ಟು 237 ಮಂದಿಯನ್ನು ಸಂಶೋಧನೆಗೊಳಪಡಿಸಲಾಗಿದ್ದು ಈ ಪೈಕಿ 18 ರೋಗಿಗಳಲ್ಲಿ ಔಷಧದ ಅಡ್ಡಪರಿಣಾಮಗಳು ಕಂಡು ಬಂದಿದ್ದು, ಕೂಡಲೇ ಔಷಧಿ ನೀಡುವಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಪ್ರಯೋಗ ನಡೆಸಲಾದ ವರದಿ ಪರಿಶೀಲನೆಯಲ್ಲಿದ್ದು, ಈ ನಡುವೆ ಸುದ್ದಿ ತಪ್ಪಾಗಿ ಪ್ರಕಟಿಸಲಾಗಿದೆ ಎಂದು ಡಬ್ಲ್ಯೂಹೆಚ್ಒ ಹೇಳಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ತಿಳಿಸಿದೆ.