ಬೀಜಿಂಗ್, ಎ.25 (DaijiworldNews/PY) : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮೃತಪಟ್ಟಿರುವುದಾಗಿ ಸುದ್ದಿ ಸಂಸ್ಥೆಯೊಂದು ಸುದ್ದಿ ಬಿತ್ತರಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿಯಾಗುತ್ತಿದೆ ಎಂದು ವರದಿ ತಿಳಿಸಿದೆ. ಆದರೆ, ಈ ವಿಚಾರವಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ಉತ್ತರ ಕೊರಿಯಾ ನೀಡಿಲ್ಲ ಎಂದು ವರದಿ ಹೇಳಿದೆ.
ಈ ಬಗ್ಗೆ ಕೊರಿಯಾ ಪ್ರದೇಶದ ತಜ್ಞರು ಹಾಗೂ ಬೋರ್ಡ್ ಆಫ್ ದ ವರ್ಲ್ಡ್ ಆ್ಯಂಡ್ ನಾರ್ಥ್ ಈಸ್ಟ್ ಪೀಸ್ ಫಾರಂನ ಅಧ್ಯಕ್ಷರು, ಇದೊಂದು ಸುಳ್ಳು ಸುದ್ದಿ ಎಂದು ಹೇಳಲು ಅಸಾಧ್ಯ ಎಂದು ಅಭಿಯ್ರಾಯಪಟ್ಟಿರುವುದಾಗಿ ವರದಿ ಹೇಳಿದೆ.
ಉತ್ತರಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಆರೋಗ್ಯ ಸ್ಥಿತಿ ಹಾಗೂ ಸಾವಿನ ಸುದ್ದಿಯ ಬಗ್ಗೆ ಅಮೆರಿಕ ಪರಿಶೀಲನೆ ಮಾಡುತ್ತಿದ್ದು, ಅಧಿಕೃತವಾಗಿ ಕಿಮ್ ಜಾಂಗ್ ನಿಧನದ ವಿಚಾರವಾಗಿ ಖಚಿತಪಡಿಸಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಕಿಮ್ ಜಾಂಗ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಲು ಅಧಿಕಾರ ಹೊಂದಿಲ್ಲ ಎಂದು ಪೆಂಟಾಗಾನ್ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದು, ಉತ್ತರ ಕೊರಿಯಾದ ಮುಂದಿನ ಉತ್ತರಾಧಿಕಾರಿ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ ಎಂದೂ ಹೇಳಿದರು.