ಬೀಜಿಂಗ್, ಎ.28 (Daijiworld News/MB) : ವಿಶ್ವದಲ್ಲೇ ಮೊದಲು ಕೊರೊನಾ ವೈರಸ್ ಪತ್ತೆಯಾಗಿದ್ದ ಚೀನಾ ಇದೀಗ ಸುಧಾರಿಸಿಕೊಂಡಿದ್ದು ಇದೀಗ ಕೆಲವು ಪ್ರಾಂತ್ಯಗಳಲ್ಲಿ ಶಾಲೆಗಳನ್ನು ಆರಂಭ ಮಾಡಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗ ಹ್ಯಾಂಗ್ಝೌ ಎಂಬ ಪ್ರಾಂತ್ಯದಲ್ಲಿ ವಿಶೇಷವಾದ ಪ್ಯ್ಯಾನ್ ಒಂದನ್ನು ಮಾಡಿದೆ.
ಶಾಲೆಗೆ ತೆರಳುವ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು ಕೇಳುವುದು ಕಷ್ಟ ಆ ನಿಟ್ಟಿನಲ್ಲಿ ಮಕ್ಕಳಿಗೆ ಹೆಲ್ಮೆಟ್ ರೀತಿಯ ಟೋಪಿ ಧರಿಸುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಮಕ್ಕಳಿಗಾಗಿಯೇ ವಿಶೇಷವಾಗಿ ಈ ಟೋಪಿಯನ್ನು ಮಾಡಲಾಗಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೀನಾದಲ್ಲಿ ಈವರೆಗೆ 82,827ಕ್ಕೆ ಪ್ರಕರಣಗಳು ದಾಖಲಾಗಿದ್ದು ಕಳೆದ ಹತ್ತು ದಿನಗಳಿಂದ ಚೀನಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಈವರೆಗೆ ಕೊರೊನಾದಿಂದ 4,632 ಜನರು ಮೃತರಾಗಿದ್ದಾರೆ.