ತೆಹ್ರಾನ್, ಎ.29 (DaijiworldNews/PY) : ಕೊರೊನಾ ವೈರಸ್ನಿಂದ ಬಚವಾಗಲು ವಿಷಕಾರಿ ಮಿಥೇನಾಲ್ ಸೇವಿಸಿ ಸುಮಾರು 700 ಮಂದಿ ಮೃತಪಟ್ಟಿರುವ ಘಟನೆ ಇರಾನ್ನಲ್ಲಿ ನಡೆದಿದೆ.
ವಿಷಕಾರಿ ಆಲ್ಕೋಹಾಲ್ ಸೇವಿಸಿ ಮೃತಪಟ್ಟಿರುವವರ ಸಂಖ್ಯೆ ಶೇ.10ರಷ್ಟು ಹೆಚ್ಚಾಗಿದೆ ಎಂಬುದಾಗಿ ಇರಾನ್ ಸರ್ಕಾರ ತಿಳಿಸಿದೆ. ಸುಮಾರು ನೂರಕ್ಕೂ ಅಧಿಕ ಜನರಲ್ಲಿ ದೃಷ್ಟಿ ಹೀನತೆ ಸೇರಿದಂತೆ ಹಲವು ಸಮಸ್ಯೆಗಳು ಎಂದು ಇರಾನ್ನ ಆರೋಗ್ಯ ಇಲಾಖೆ ವಿವರಿಸಿದೆ.
ಇರಾನ್ನಲ್ಲಿ ಸೋಂಕಿತರ ಸಂಖ್ಯೆ 91 ಸಾವಿರಕ್ಕೆ ಏರಿದ್ದು, 5 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಆರೋಗ್ಯ ಇಲಾಖೆ ಹೇಳಿದೆ.
ಸುಮಾರು 728 ಮಂದಿ ಕಳೆದ ಫೆಬ್ರವರಿಯಿಂದ ಎಪ್ರಿಲ್ 7ರವರೆಗೆ ಸಾವನ್ನಪ್ಪಿದ್ದಾರೆ.
ವಿಷಕಾರಿ ಮಿಥೇನಾಲ್ಗೆ ವಾಸನೆ ಇರುವುದಿಲ್ಲ. ಜೊತೆಗೆ ರುಚಿಯೂ ಇರುವುದಿಲ್ಲ. ಟಾಕ್ಸಿಕ್ ಅಂಶ ಇದರಲ್ಲಿ ಹೆಚ್ಚಿದ್ದು, ಇರಾನ್ನಲ್ಲಿ ಆಲ್ಕೋಹಾಲಿಕ್ ದ್ರವಣಗಳಲ್ಲಿ ಅಕ್ರಮವಾಗಿ ಇದನ್ನು ಉಪಯೋಗಿಸಲಾಗುತ್ತಿದೆ.