ಬೀಜಿಂಗ್, ಮೇ 03 (DaijiworldNews/PY) : ಅಮೆರಿಕ ಈವರೆಗ ಕೊರೊನಾ ವೈರಸ್ ಉಗಮದ ಕುರಿತಂತೆ ಮಾಡಿರುವ ಆರೋಪಕ್ಕೆ ಕಿರುಚಿತ್ರವೊಂದರ ಮೂಲಕ ಚೀನಾ ವ್ಯಂಗ್ಯವಾಗ ತಿರುಗೇಟು ನೀಡಿದೆ.
ಚೀನಾವು ಅನಿಮೇಷನ್ ತಂತ್ರಜ್ಞಾನದ ಮುಖಾಂತರ ಒನ್ಸ್ ಅಪಾನ್ ಎ ವೈರಸ್ ಎನ್ನುವ ಹೆಸರಿನಲ್ಲಿ ಒಂದೂವರೆ ನಿಮಿಷದ ಕಿರುಚಿತ್ರವನ್ನು ಸಿದ್ದ ಮಾಡಿದೆ. ಮಾಸ್ಕ್ ಧರಿಸಿದ್ದ ಮಾನವನ ಆಕೃತಿ ಚೀನಾ ಹಾಗೂ ಅಮೆರಿಕದ ಲಿಬರ್ಟಿ ಪ್ರತಿಮೆಯ ನಡುವೆ ಒಂದೂವರೆ ನಿಮಿಷಗಳವರೆಗೆ ಕುತೂಹಲಕಾರಿಯಾದ ಸಂಭಾಷಣೆ ನಡೆಯುತ್ತದೆ. ಈ ಸಂಭಾಷಣೆಯ ಮುಖಾಂತರ ಅಮೆರಿಕದ ಎಲ್ಲಾ ಆರೋಪಕ್ಕೆ ಚೀನಾ ತಿರುಗೇಟು ನೀಡಿದೆ.
ಮಾಸ್ಕ್ ಧರಿಸಿದ ಆಕೃತಿ ಚೀನಾ ಡಿಸೆಂಬರ್ನಲ್ಲಿ ಮೊದಲು, ಹೊಸ ವೈರಸ್ ಪತ್ತೆಯಾಗಿದೆ ಎಂದು ಹೇಳುತ್ತದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಸಂದೇಶವನ್ನು ಗ್ರಹಿಸಿರುವುದಾಗಿ ಹೇಳುತ್ತದೆ. ಇದಕ್ಕೆ ಮಾಸ್ಕ್ ಧರಿಸದ ಅಮೆರಿಕದ ಲಿಬರ್ಟಿ ಪ್ರತಿಮೆಯು, ಅದಕ್ಕೇನು ಎಂದು ಪ್ರಶ್ನೆ ಮಾಡುತ್ತದೆ. ಅದಕ್ಕೆ ಮಾನವನ ಆಕೃತಿಯು ಮಾಸ್ಕ್ ಧರಿಸುವಂತೆ ಸಲಹೆ ನೀಡುತ್ತದೆ. ಆದರೆ, ಲಿಬರ್ಟಿ ಪ್ರತಿಮೆ ಅದನ್ನು ಅಲಕ್ಷಿಸಿ ಮಾತನಾಡುತ್ತದೆ.
ನಂತರ ಚೀನಾ, ಮಾರ್ಚ್ ಹೊತ್ತಿನಲ್ಲಿ ತನ್ನಲ್ಲಿ ವೈರಸ್ ಕಡಿಮೆಯಾಗಿದೆ ಎಂದು ಹೇಳುತ್ತದೆ. ಆದರೆ, ಇದಕ್ಕೆ ಉತ್ತರ ನೀಡಿದ ಲಿಬರ್ಟಿ ಪ್ರತಿಮೆ, ಜಗತ್ತಿಗೆ ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ವಾದ ನಡೆಸುತ್ತದೆ. ಅಷ್ಟೊತ್ತಿಗಾಗಲೇ ಲಿಬರ್ಟಿ ಪ್ರತಿಮೆ ಮುಖಕ್ಕೆ ಮಾಸ್ಕ್ ಹಾಕಿರುತ್ತದೆ.
ಕೊರೊನಾ ವೈರಸ್ ನ ಮೂಲ ಚೀನಾದ ವುಹಾನ್ ವನ್ಯಜೀವಿಗಳ ಮಾಂಸದ ಮಾರುಕಟ್ಟೆಯಲ್ಲ. ವುಹಾನ್ನ ವೈರಾಣು ಲ್ಯಾಬ್ ಎಂದು ಈವರೆಗೆ ಅಮೆರಿಕ ಆರೋಪ ಮಾಡುತ್ತಾ ಬಂದಿದೆ. ಅಲ್ಲದೇ, ಚೀನಾವು ವೈರಸ್ ಕುರಿತ ಮಾಹಿತಿಯನ್ನು ಅವಿತಿಟ್ಟಿದೆ ಎಂದು ಅಮೆರಿಕ ಆರೋಪಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಮುಖವಾಣಿ ಎಂಬಂತಾಗಿದೆ ಎಂದಿದೆ.