ವಾಷಿಂಗ್ಟನ್, ಮೇ 09 (Daijiworld News/MB) : ಅಮೆರಿಕಾದಲ್ಲಿ ಜನರ ಮಾರಣಹೋಮ ನಡೆಸುತ್ತಿರುವ ಕೊರೊನಾ ಸೋಂಕು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಆಪ್ತ ಸಹಾಯಕಿಗೂ ದೃಢಪಟ್ಟಿದೆ.
ಈವರೆಗೆ ಶ್ವೇತಭವನದ ಮೂರು ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟಿದ್ದು ಇವಾಂಕ ಆಪ್ತ ಸಹಾಯಕಿಗೆ ಕೊರೊನಾ ಪಾಸಿಟಿವ್ ಆದ ಹಿನ್ನಲೆಯಲ್ಲಿ ಇವಾಂಕ ಹಾಗೂ ಅವರ ಪತಿ ಜೇರೆಡ್ ಕುಶ್ನರ್ನ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಶುಕ್ರವಾರದ ವರದಿ ನೆಗೆಟಿವ್ ಬಂದಿದೆ.
ಈ ಸಿಬ್ಬಂದಿ ಹಲವು ವಾರಗಳಿಂದ ಕಾಣಿಸಿಕೊಂಡಿಲ್ಲ, ಆಕೆ ಟೆಲಿ ವರ್ಕಿಂಗ್ ಮಾಡುತ್ತಿದ್ದರು. ಅವರಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಲಾಗಿದೆ.