ಲಂಡನ್,ಮೇ 14 (Daijiworld News/MSP): ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ.
ಇದೀಗ ಅಂತದ್ದೆ ಮತ್ತೊಂದು ಟ್ವೀಟ್ ಮಾಡಿ ಮಲ್ಯ ಸುದ್ದಿಯಲ್ಲಿದ್ದಾರೆ, "ನನ್ನ ಸಾಲ ಎಲ್ಲವನ್ನೂ ಪಾವತಿಸುತ್ತೇನೆ ಎಂದರೂ ಸರ್ಕಾರ ನನ್ನನ್ನು ನಿರ್ಲಕ್ಷ್ಯಿಸುತ್ತಿದೆ" ಎಂದು ಗೋಗರೆದಿದ್ದಾರೆ.
"ಕೋವಿಡ್ 19 ಪರಿಹಾರ ಪ್ಯಾಕೇಜ್ ಘೋಷಿಸಿದ ಸರ್ಕಾರಕ್ಕೆ ಅಭಿನಂದನೆಗಳು. ಅವರು ಅವರಿಗೆ ಬಯಸಿದಷ್ಟು ಕರೆನ್ಸಿಯನ್ನು ಮುದ್ರಿಸಬಹುದು. ಆದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಲವನ್ನು ಶೇಕಡ 100ರಷ್ಟೂ ಪಾವತಿಸುತ್ತೇನೆ ಎಂದರೂ, ಆರ್ಥಿಕತೆಗೆ ಚಿಕ್ಕ ಕೊಡುಗೆ ಕೊಡುವ ನನ್ನಂಥ ವ್ಯಕ್ತಿ ನಿರಂತರವಾಗಿ ನಿರ್ಲಕ್ಷಿಸುತ್ತಿರುವುದೇಕೆ?" ಎಂದು ಪ್ರಶ್ನಿಸಿದ್ದಾರೆ.
ಅವರ ಈ ಟ್ವೀಟ್ ಅನ್ನು ಐದು ಸಾವಿರಕ್ಕೂ ಹೆಚ್ಚು ಜನ ಮೆಚ್ಚಿದ್ದು, 900ಕ್ಕೂ ಹೆಚ್ಚು ಜನ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಹಳಷ್ಟು ಜನ ಅದು ನಿಮ್ಮ ಹಣವೋ ಅಥವಾ ನಮ್ಮ ಹಣವೋ ಎಂದು ಪ್ರಶ್ನಿಸಿದ್ದಾರೆ.