ವೆಲ್ಲಿಂಗ್ಟನ್, ಮೇ 17 (Daijiworld News/MB) : ಕೊರೊನಾ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾದ ಕೆಫೆಯೊಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನ್ಯೂಝಿಲ್ಯಾಂಡ್ ಪ್ರಧಾನಿಗೆಯೇ ಕೆಫೆ ಪ್ರವೇಶಕ್ಕೆ ನಿರಾಕರಿಸಿದ ಘಟನೆ ನಡೆದಿದ್ದು ಇದೀಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ.
ಶನಿವಾರ ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಹಾಗೂ ಅವರ ಸಂಗಾತಿ ಕ್ಲರ್ಕ್ ಗೇಫೋರ್ಡ್ ಕೆಫೆಯೊಂದಕ್ಕೆ ಹೋಗಿದ್ದು ಕೆಫೆ ಭರ್ತಿಯಾಗಿದೆ ಎಂಬ ಕಾರಣದಿಂದಾಗಿ ಅವರನ್ನು ವಾಪಾಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಗೇಫೋರ್ಡ್, ಇದು ನನ್ನಿಂದಲ್ಲೇ ಆಗಿರುವ ತಪ್ಪು. ಕುಟುಂಬದೊಂದಿಗೆ ಊಟ ಮಾಡಲು ಸ್ಥಳವನ್ನು ಕಾಯ್ದಿರಿಸಿರಲಿಲ್ಲ. ಆದರೆ ನಾವು ವಾಪಾಸ್ ಹೋದ ಸಂದರ್ಭದಲ್ಲಿ ಕೆಫೆಯಲ್ಲಿದ್ದ ಓರ್ವ ವ್ಯಕ್ತಿ ಸ್ಥಳವಕಾಶ ಮಾಡಿಕೊಟ್ಟು ಊಟ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ತಂದಿರುವ ನಿಟ್ಟಿನಲ್ಲಿ ನ್ಯೂಝಿಲ್ಯಾಂಡ್ ಪ್ರಧಾನಿ ಅವರನ್ನು ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯೂಝಿಲ್ಯಾಂಡ್ನಲ್ಲಿ ಈವರೆಗೆ 1500 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಪೈಕಿ 1433 ಮಂದಿ ಗುಣಮುಖರಾಗಿದ್ದಾರೆ. 21 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.