ಲಂಡನ್, ಮೇ 20 (Daijiworld News/MB) : ವಿಶ್ವದಲ್ಲೇ ಆತಂಕಕ್ಕೆ ಕಾರಣವಾಗಿರುವ ಕೊರೊನಾ ಸೋಂಕು ತನ್ನ ಕರಾಳ ಹಸ್ತವನ್ನು ಚಾಚುತ್ತಲ್ಲೇ ಇದೆ. ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 48 ಲಕ್ಷಕ್ಕೆ ಏರಿಕೆಯಾಗಿದ್ದು 3.23 ಲಕ್ಷ ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ.
ಇನ್ನು 48,97,842 ಮಂದಿ ಸೋಂಕಿತರ ಪೈಕಿ 1,959,149 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆಂದು ವರದಿಯಾಗಿದೆ.
ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಅಮೆರಿಕಾದಲ್ಲಿ 1,570,583 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 93,533 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ರಷ್ಯಾದಲ್ಲಿ 299,941, ಸ್ಪೇನ್ 278,803, ಬ್ರಿಟನ್ 248,818, ಇಟಲಿ 226,699, ಫ್ರಾನ್ಸ್ 180,809, ಜರ್ಮನಿಯಲ್ಲಿ 177,827 ಮಂದಿ ಸೋಂಕಿಗೊಳಗಾಗಿದ್ದಾರೆಂದು ವರದಿಗಳು ತಿಳಿಸಿವೆ.