ನ್ಯೂಯಾರ್ಕ್, ಮೇ 21 (Daijiworld News/MSP): ಅಮೆರಿಕಾ ನ್ಯೂಯಾರ್ಕ್ ನಲ್ಲಿ ಕೊರೊನಾ ಹೆಮ್ಮಾರಿಗೆ ಭಾರತೀಯ ಮೂಲದ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಡಾ. ಸುಧೀರ್ ಎಸ್ ಚೌಹಾಣ್ ಎಂದು ಗುರುತಿಸಲಾಗಿದೆ. ಇವರು ಕಳೆದ ಹಲವು ವಾರಗಳಿಂದ ಕೊರೊನಾದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಮೇ 19 ರಂದು ಚಿಕಿತ್ಸೆ ಫಲಿಸದೆ ಮೃತಪತ್ಟಿದ್ದಾರೆ ಎಂದು ಎಎಪಿಐನ ಮಾಧ್ಯಮ ಸಂಯೋಜಕ ಅಜಯ್ ಘೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಮೈಕಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಮತ್ತು ಮತ್ತು ಐಎಂ ರೆಸಿಡೆನ್ಸಿಯ ಸಹಾಯಕ ಕಾರ್ಯಕ್ರಮ ನಿರ್ದೇಶಕರಾಗಿ ಡಾ. ಚೌಹಾನ್ ಸೌಮ್ಯ ಸ್ವಭಾವ ಮತ್ತು ಕಾಳಜಿಯುಳ್ಳ ಮನೋಭಾವವನ್ನು ಹೊಂದಿದ್ದರು ಎಂದು ಮಗಳು ಸ್ನೇಹ ಚೌಹಾನ್ ಎಎಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಭಾರತೀಯ ಮೂಲದ ವೈದ್ಯರಿಬ್ಬರನ್ನು (ತಂದೆ-ಮಗಳು) ನ್ಯೂಜೆರ್ಸಿಯಲ್ಲಿ ಕೊರೊನಾ ಬಲಿ ಪಡೆದಿತ್ತು.