ಜೆರುಸಲೇಂ, ಮೇ 25 (Daijiworld News/MB) : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲಿರುವ ಭ್ರಷ್ಟಾಚಾರದ ಆರೋಪದ ಕುರಿತಾಗಿ ವಿಚಾರಣೆ ಭಾನುವಾರ ಆರಂಭವಾಗಿದೆ.
ನೆತನ್ಯಾಹು ಅವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಮತ್ತು ಲಂಚ ಸ್ವೀಕರಿಸಿದ ಆರೋಪವಿದ್ದು ಇದರ ಆರಂಭಿಕ ವಿಚಾರಣೆ ಜೆರುಸಲೇಂ ನ್ಯಾಯಾಲಯದಲ್ಲಿ ನಡೆಯಲಿದೆ.
ಇದೇ ಮೊದಲ ಬಾರಿಗೆ ಇಸ್ರೇಲ್ನಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿಯ ಕುರಿತಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಬಹುಕಾಲದಿಂದ ರಾಜಕೀಯವಾಗಿ ಅಸ್ಥಿರವಾಗಿದ್ದ ನೆತನ್ಯಾಹು ಇತ್ತೀಚೆಗೆ ಅಧಿಕಾರ ಪಡೆದಿದ್ದಾರೆ.