ದುಬೈ, ಮೇ 28 (DaijiworldNews/PY) : ಸರ್ಕಾರಿ ಕಚೇರಿಗಳಲ್ಲಿನ ನೌಕರರ ಕೆಲಸವನ್ನು ಮೇ 31 ರ ಭಾನುವಾರದಿಂದ ಶೇ.50 ರಷ್ಟು ಹಾಗೂ 2020 ರ ಜೂನ್ 14 ರಿಂದ ಶೇ. 100ರಷ್ಟು ಉದ್ಯೋಗಿಗಳೊಂದಿಗೆ ಕೆಲಸ ಪುನರಾರಂಭಿಸುವ ನಿರ್ಧಾರವನ್ನು ದುಬೈ ಬುಧವಾರ ಅಂಗೀಕರಿಸಿದೆ ಎಂದು ಉತ್ತರಾಧಿಕಾರಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೇಳಿದ್ದಾರೆ.
ಯುಎಇಯ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಹಾಗೂ ದುಬೈ ಆಡಳಿತಗಾರ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ರಶೀದ್ ಆಲ್ ಮುಕ್ತೌಮ್ ಅವರ ನಿದೇರ್ಶನದಂತೆ ಶೇಖ್ ಹಮ್ದಾನ್ ಘೋಷಣೆ ಮಾಡಿದ್ದು, ಸಾಮಾನ್ಯ ಜೀವನವನ್ನು ಪುನರ್ಸ್ಥಾಪನೆ ಮಾಡುವ ಸಲುವಾಗಿ ಈ ಪ್ರಕಟಣೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಶೇಖ್ ಹಮ್ದಾನ್ನ ಈ ತೀರ್ಮಾನವು, ದುಬೈ ಸರ್ಕಾರದ ಸಮಗ್ರ ಯೋಜನೆಯ ಭಾಗವಾಗಿದ್ದು, ಎಮಿರೇಟ್ನಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನರ್ಸ್ಥಾಪಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆರೋಗ್ಯ ಅಧಿಕಾರಿಗಳ ವಿವರಿಸಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಆರ್ಥಿಕ ಚಟುವಟಿಕೆಗಳನ್ನು ಕ್ರಮೇಣವಾಗಿ ಪುನಃ ಆರಂಭ ಮಾಡುವ ಭಾಗವಾಗಿ ಕಾರ್ಯಾಚರಣಯನ್ನು ಪುನರಾರಂಭಿಸಿದ ಇತರ ಕ್ಷೇತ್ರಗಳು ಕೂಡಾ ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿವೆ. ಅಲ್ಲದೇ, ಉತ್ತರಾಧಿಕಾರಿ ಅವರ ನಿರ್ದೇಶನದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಅಲ್ಲದೇ ಈ ಕ್ರಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ನಾಗರಿಕರ, ನಿವಾಸಿಗಳ ಆರೋಗ್ಯ, ಸುರಕ್ಷತೆಯನ್ನು ಕಾಪಾಡಲು ಹಾಗೂ ಆರ್ಥಿಕತೆಯನ್ನು ಪುನಃ ಆರಂಭ ಮಾಡಲು ದುಬೈ ಸರ್ಕಾರದ ಈ ತೀರ್ಮಾನವು ಸ್ಥಿರವಾಗಿದೆ. ಆರ್ಥಿಕ ಕ್ಷೇತ್ರಗಳನ್ನು ಹಾಗೂ ಜಾಗತಿಕ ಬಿಕ್ಕಟ್ಟಿನ ಪರಿಣಾಮಗಳಿಂದ ಪ್ರಭಾವಿತಾದವರನ್ನು ಬೆಂಬಲಿಸಲು ಸರ್ಕಾರ ಬದ್ದವಾಗಿದೆ. ದುಬೈಯಲ್ಲಿ ಹೆಚ್ಚಿನ ತಂತ್ರಜ್ಞಾನ ಮೂಲಸೌಕರ್ಯ ಇರುವ ಕಾರಾಣ ಈ ಸಾಂಕ್ರಮಿಕ ರೋಗದಿಂದ ಉಂಟಾಗುವ ಸವಾಲುಗಳನ್ನು ಎದುರಿಸಬಹುದಾಗಿದೆ. ಬಿಕ್ಕಟ್ಟುಗಳನ್ನು ನಿರ್ವಹಿಸುವಲ್ಲಿ, ಆರ್ಥಿಕತೆಯನ್ನು ಬೆಂಬಲಿಸಲು ಮತ್ತು ಸಮುದಾಯವನ್ನು ರಕ್ಷಿಸಲು ಹೊಸ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಇದು ಜಗತ್ತಿಗೆ ಉದಾಹರಣೆಯಾಗಿದೆ ಎಂದು ತಿಳಿಸಿದರು.
ಉದ್ಯೋಗಿಗಳು ಹಾಗೂ ಗ್ರಾಹಕರ ಯೋಗಕ್ಷೇಮವನ್ನು ರಕ್ಷಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲು ದುಬೈನ ಎಲ್ಲಾ ಸರ್ಕಾರಿ ಸಂಸ್ಥೆಗಳು ಸಂಪೂರ್ಣ ಬದ್ದವಾಗಿರಬೇಕು. ಅಲ್ಲದೇ, ಸುಮದಾಯದ ಆರೋಗ್ಯ ಹಾಗೂ ಸುರಕ್ಷತಗೆ ನಾಯಕತ್ವು ಹೆಚ್ಚಿನ ಆದ್ಯತೆ ನೀಡುತ್ತದೆ ಎಂದರು.
ಈ ತೀರ್ಮಾನವು ಕೆಲವು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ದುಬೈ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಮಹಾನಿರ್ದೇಶಕ ಅಬ್ದುಲ್ಲಾ ಅಲಿ ಬಿನ್ ಜಾಯೆದ್ ಅಲ್ ಫಲಾಸಿ ಹೇಳಿದ್ದಾರೆ.
ಸರ್ಕಾರಿ ಸೇವೆಗಳನ್ನು ಪಡೆಯಲು ಸ್ಮಾರ್ಟ್ಪರಿಹಾರಗಳನ್ನು ಬಳಸಲು ಗ್ರಾಹಕರನ್ನು ಪ್ರೋತ್ಸಾಹಿಸುವ ಮಹತ್ವದ ಬಗ್ಗೆ ಅಲ್ ಫಲಾಸಿ ಅವರು ತಿಳಿಸಿದ್ದು, ಇದು ನೌಕರರನ್ನು ಹಾಗೂ ಗ್ರಾಹಕರನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಎಲ್ಲಾ ದುಬೈ ಸರ್ಕಾರಿ ಘಟಕಗಳಿಗೆ ದುಬೈ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ನಂತರದ ದಿನಗಳಲ್ಲಿ ಸುತ್ತೋಲೆ ಹೊರಡಿಸಲಿದ್ದು, ಕಚೇರಿಯ ಪೂರ್ಣ ಕಾರ್ಯಚರಣೆ ಪುನರಾರಂಭಕ್ಕೆ ಸಂಬಂಧಪಟ್ಟ ಕ್ರಮಗಳ ವಿವರಗಳನ್ನು ಒದಗಿಸಲಿದೆ.