ವಾಷಿಂಗ್ಟನ್, ಮೇ 29 (Daijiworld News/MSP): ಸ್ವಂತ ರಾಷ್ಟ್ರ ಅಮೇರಿಕಕ್ಕಿಂತಲೂ ನನಗೆ ಭಾರತ ಇಷ್ಟವಾಗಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಗುರುವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಗೊತ್ತು ಭಾರತದಲ್ಲಿ ನನ್ನನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಈ ದೇಶದಲ್ಲಿ ನನ್ನನ್ನು ಇಷ್ಟಪಡುವವರಿಗಿಂತ ಭಾರತದಲ್ಲಿ ನನ್ನನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು " ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಷ್ಟಪಡುತ್ತೇನೆ. ಅವರು ಒಬ್ಬ ಮಹಾನ್ ಸಂಭಾವಿತ ವ್ಯಕ್ತಿ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಇದೇ ಸಂದರ್ಭ ಆದರೆ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಬಗ್ಗೆ ಕೇಳಿದಾಗ, "ಭಾರತ ಮತ್ತು ಚೀನಾವೂ 1.4 ಶತಕೋಟಿ ಜನರಿರುವ ದೇಶಗಳಾಗಿವೆ. ಅಲ್ಲದೆ ಎರಡು ದೇಶಗಳು ಕೂಡಾ ಅತ್ಯಂತ ಶಕ್ತಿಶಾಲಿ ಮಿಲಿಟರಿಗಳನ್ನು ಹೊಂದಿದೆ. ಗಡಿ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಸಂಘರ್ಷದಿಂದ ಸಧ್ಯ ಭಾರತವು ಸಂತೋಷವಾಗಿಲ್ಲ ಮತ್ತು ಬಹುಶಃ ಚೀನಾ ಸಂತೋಷವಾಗಿಲ್ಲ" ಎಂದು ಹೇಳಿದರು.