ಜಕಾರ್ತ, ಮೇ 30 (DaijiworldNews/PY) : ಕೊರೊನಾ ವೈರಸ್ ಪತ್ನಿ ಇದ್ದಂತೆ ಎಂದ ಇಂಡೋನೇಷ್ಯಾದ ರಕ್ಷಣಾ ಸಚಿವರು ಇದೀಗ ಟೀಕೆಗೆ ಗುರಿಯಾಗಿದ್ದಾರೆ.
ಜಕಾರ್ತದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಸಚಿವ ಮೊಹಮ್ಮದ್ ಮಹಫೂದ್ ಅವರು, ಆ ವೇಳೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದ ಮೀಮ್ವೊಂದನ್ನು ಪ್ರಸ್ತಾಪಿಸಿದ್ದರು.
ಇತ್ತೀಚೆಗೆ ನನ್ನ ಸಹೋದ್ಯೋಗಿವೊಬ್ಬರು ಮೀಮ್ವೊಂದನ್ನು ಕಳುಹಿಸಿದ್ದರು. ಕೊರೊನಾ ವೈರಸ್ ನಿಮ್ಮ ಹೆಂಡತಿ ಇದ್ದಂತೆ. ಆಕೆಯನ್ನು ಮೊದಲು ನಿಯಂತ್ರಿಸಲು ಪ್ರಯತ್ನಿಸಿ. ಇದು ಆಗದ ಕೆಲಸ ಎಂದು ತಿಳಿದ ನಂತರ, ಆಕೆಯೊಂದಿಗೆ ಹೊಂದಿಕೊಂಡು ಬಾಳುತ್ತೀರಿ. ಅದೇ ರೀತಿಯಾಗಿ ಕೊರೊನಾ ವೈರಸ್ನೊಂದಿಗೆ ಬಾಳಬೇಕು ಎಂದು ಅದರಲ್ಲಿತ್ತು ಎಂದು ಹೇಳಿದ್ದರು.
ಈ ಹೇಳಿಕೆ ಅಧಿಕಾರದಲ್ಲಿರುವವರ ಮಹಿಳಾ ವಿರೋಧಿ ಮನಸ್ಥತಿಯನ್ನೂ ತೋರಿಸುತ್ತದೆ. ಇದು ಕೀಳು ಅಭಿರುಚಿಯ ಹೇಳಿಕೆ ಎಂದು ವುಮೆನ್ಸ್ ಸಾಲಿಡಾರಿಟಿ ಗ್ರೂಪ್ನ ಮುಖ್ಯಸ್ಥೆ ದಿಂಡಾ ನಿಸಾ ಯುರಾ ಆರೋಪಿಸಿದ್ದಾರೆ.