ಬೀಜಿಂಗ್, ಜೂ 08 (DaijiworldNews/PY) : ಚೀನಾ ಸರ್ಕಾರ ಕೊರೊನಾ ಹುಟ್ಟಿನ ಬಗ್ಗೆ ಭಾನುವಾರ ಶ್ವೇತಪತ್ರ ಬಿಡುಗಡೆ ಮಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ರಾಷ್ಟ್ರಗಳಿಗೆ ಸಾಂಕ್ರಾಮಿಕ ಕುರಿತು ಮಾಹಿತಿ ನೀಡಲು ವಿಳಂಬ ಮಾಡಿದ ಆರೋಪವನ್ನು ನಿರಾಕರಣೆ ಮಾಡಿದೆ.
ವುಹಾನ್ನ ಆಸ್ಪತ್ರೆಯಲ್ಲಿ ಡಿಸೆಂಬರ್ 27ರಂದು ಮೊದಲ ಬಾರಿಗೆ ಕೊರೊನಾ ವೈರಸ್ ಪತ್ತೆಯಾಯಿತು. ಆದರೆ, ಪ್ರಾರಂಭದಲ್ಲಿಇದನ್ನು ಪರಿಶೀಲನೆ ಮಾಡಿದ ತಜ್ಞರು ಇದು ಒಂದು ವೈರಲ್ ನ್ಯೂಮೋನಿಯಾ ಎನ್ನುವ ನಿರ್ಧಾರಕ್ಕೆ ಬಂದರು.
ಜನವರಿ 19ರಂದು ಮೊದಲ ಬಾರಿಗೆ ಈ ಸೋಂಕು ಮಾನವನಿಂದ ಮಾನವನಿಗೆ ಹರಡುವುದನ್ನು ರಾಷ್ಟ್ರೀಯ ಆರೋಗ್ಯ ಆಯೋಗದ ತಜ್ಞರು ಪತ್ತೆ ಮಾಡಿದ್ದತು. ಇದಕ್ಕಿಂತ ಮೊದಲು, ಈ ವಿಚಾರದ ಬಗ್ಗೆ ಸಾಕಷ್ಟು ಪುರಾವೆಗಲು ದೊರಕಿರಲಿಲ್ಲ. ಸೋಂಕು ಹರಡಲು ಬಾವಲಿಗಳು ಹಾಗೂ ಚಿಪ್ಪುಹಂದಿಗಳು ಮಧ್ಯವರ್ತಿ ಮೂಲಗಳಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರೂ ಈ ವಿಚಾರದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂಬುದಾಗಿ ಶ್ವೇತಪತ್ರದಲ್ಲು ಉಲ್ಲೇಖಿಸಿದೆ. ಚೀನ ವಿರುದ್ಧ ಹಲವು ರಾಷ್ಟ್ರಗಳು ಸೋಂಕು ಉಗಮವಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಡಿದು ನಿಂತಿದ್ದು, ಕಾನೂನು ಹೋರಾಟಕ್ಕೂ ಕೂಡಾ ಸಿದ್ದತೆ ನಡೆಸಿವೆ.