ವಾಷಿಂಗ್ಟನ್, ಜೂ 19 (DaijiworldNews/PY) : ಸಂಘಟಿತ ದ್ವೇಷದ ವಿರುದ್ದದ ತನ್ನ ನೀತಿಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಫೇಸ್ಬುಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದ ಪೋಸ್ಟ್ಗಳನ್ನು ಹಾಗೂ ಜಾಹೀರಾತುಗಳನ್ನು ತೆಗೆದುಹಾಕಿರುವುದಾಗಿ ಗುರುವಾರ ತಿಳಿಸಿದೆ.
ಈ ಬಗ್ಗೆ ಫೇಸ್ಬುಕ್ ಕಂಪೆನಿಯ ವಕ್ತಾರರು ಮಾತನಾಡಿದ್ದು, ನಮ್ಮ ನೀತಿಯು ರಾಜಕೀಯ ಕೈದಿಗಳನ್ನು ಗುರುತಿಸಲು ಉಪಯೋಗಮಾಡುತ್ತಿದ್ದ ನಿಷೇಧಿತ ದ್ವೇಷದ ಚಿಹ್ನೆ ಬಳಸುವುದನ್ನು ನಿಷೇಧಿಸುತ್ತದೆ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಜಾಹೀರಾತಿನಲ್ಲಿ ತಲೆಕೆಳಗಾದ ಕೆಂಪು ತ್ರಿಕೋನದ ಗುರುತುಗಳಿದ್ದವು. ಈ ಗುರುತು ರಾಜಕೀಯ ಕೈದಿಗಳನ್ನು ಗುರುತಿಸಲು ನಾಜಿಗಳು ಬಳಸಿದ ಸಂಕೇತವೂ ಆಗಿದೆ. ಫ್ಯಾಸಿಸ್ಟ್ ಆಂದೋಲನಕ್ಕೆ ಸಹಿ ಮಾಡಿ ಎಂದು ಫೇಸ್ಬುಕ್ ಬಳಕೆದಾರನು ಕೇಳಿದ ಪೋಸ್ಟ್ಗಳನ್ನು ಟ್ರಂಪ್ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರಿಗೆ ಸಂಬಂಧಪಟ್ಟ ಪೇಜ್ಗಳು ಹಾಗೂ ಟೀಮ್ ಟ್ರಂಪ್ ಫೇಸ್ಬುಕ್ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ಆದರೆ, ಇದನ್ನು ಫೇಸ್ಬುಕ್ ಸಂಘಟಿತ ದ್ವೇಷ ಎಂದು ಪರಿಗಣಿಸಿ ಆ ಪೋಸ್ಟ್ ಹಾಗೂ ಜಾಹೀರಾತುಗಳನ್ನು ತೆಗೆದುಹಾಕಿದೆ.
ಡೊನಾಲ್ಡ್ ಟ್ರಂಪ್ ಅವರು ಬಳಸಿದ್ದ ಚಿಹ್ನೆಯೂ ನಾಜಿ ಆಡಳಿತ ಬಳಸಿದ ಚಿಹ್ನೆಯನ್ನೇ ಬಳಸಿ ಚಿಹ್ನೆಯಂತೆ ಹೋಲುತ್ತದೆ. ಈ ವಿಚಾರದ ಇತಿಹಾಸ ಹಾಗೂ ಅರ್ಥದ ಬಗ್ಗೆ ಗೊತ್ತಿರಲಿ ಎಂಬುದಾಗಿ ಮಾನನಷ್ಟ ವಿರೋಧಿ ಒಕ್ಕೂಟದ ಸಿಇಒ ಜೊನಾಥ್ ಗ್ರೀನ್ಬ್ಲಾಟ್ ತಿಳಿಸಿದ್ದಾರೆ.
ಫ್ಯಾಸಿಸ್ಟ್ ವಿರೋಧಿ ಸಂಕೇತವು ತಲೆಕೆಳಗಾದ ಕೆಂಪು ತ್ರಿಕೋನವಾಗಿದ್ದು, ಹಾಗಾಗಿ ನಾವು ಜಾಹೀರಾತಿನಲ್ಲಿ ಫ್ಯಾಸಿಸ್ಟ್ ವಿರೋಧದ ಕುರಿತ ಚಿಹ್ನೆಯನ್ನು ಹಾಕಿದ್ದೆವು ಎಂದು ಟ್ರಂಪ್ ಅಭಿಯಾನದ ವಕ್ತಾರ ಟಿಮ್ ಮುರ್ತಾಗ್ ಹೇಳಿದ್ದಾರೆ.